ಮುಲ್ಕಿ: ಮುಲ್ಕಿ ಸಮೀಪದ ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ವತಿಯಿಂದ ನಡೆಯುವ ವರ್ಷಾವಧಿ ಗಡುಬಾಡು ಪಾದೆ ಕೋಲ ನೇಮೋತ್ಸವವು ವಿಜ್ರಂಭಣೆಯಿಂದ ನಡೆಯಿತು.
ಸಂಜೆ 8 ಗಂಟೆಗೆ ಭಂಡಾರ ಇಳಿಯುವ ಕಾರ್ಯಕ್ರಮ ನಡೆದು ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು.
ಬಳಿಕ ಮಟ್ಟು ಕೋರ್ದಬ್ಬು ದೈವ ದ ಬೇಟಿ ನಡೆದು ನೇಮೋತ್ಸವ ಸಮಾಪನಗೊಂಡಿತು.
ಈ ಸಂದರ್ಭ ಗುತ್ತಿನಾರ್ ದೆಪ್ಪುಣಿಗುತ್ತು ಸುಧಾಕರ್ ಶೆಟ್ಟಿ, ರಾಮದಾಸ ಶೆಟ್ಟಿ ಬಾಳಿಕೆ ಮನೆ, ವಸಂತ್ ಸುವರ್ಣ, ಗಂಗಾಧರ ಶೆಟ್ಟಿ ಬೆರ್ಕೆ ತೋಟ, ಧನಂಜಯ ಮಟ್ಟು, ನಯೇಶ್ ಶೆಟ್ಟಿ,ಉತ್ತಮ್ ಮೈಲೊಟ್ಟು, ದಯಾನಂದ ಮಟ್ಟು, ಗಿರಿಧರ ಕಾಮತ್, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
25/01/2022 02:44 pm