ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಪರೂಪದ ಶ್ರೀನಿವಾಸ ಕಲ್ಯಾಣಕ್ಕೆ ಭಕ್ತರು ಪುಳಕ: ಏನಿದರ ಹಿನ್ನೆಲೆ?

ವಿಶೇಷ ವರದಿ: ರಹೀಂ ಉಜಿರೆ

ಕುಂಬಾಶಿ: ಶ್ರೀನಿವಾಸ ಮೂರ್ತಿಯನ್ನು ಎತ್ತಿ ಆಡಿಸುತ್ತಿರುವ ಪುರೋಹಿತರು, ಭಕ್ತರ ಗೋವಿಂದ ಗೋವಿಂದ ಎನ್ನುವ ನಾಮಸ್ಮರಣೆ... ಇದು ಅಪರೂಪವಾಗಿ ನಡೆಯುವ ಶ್ರೀನಿವಾಸ ಕಲ್ಯಾಣದ ದೃಶ್ಯ..

ಪುರಾಣದಲ್ಲಿ ಶ್ರೀನಿವಾಸ ಕಲ್ಯಾಣಕ್ಕೆ ವಿಶೇಷ ಮಹತ್ವ. ಭಕ್ತರನ್ನು ಉದ್ದಾರ ಮಾಡುವುದಕ್ಕೆ ಭಗವಂತ ಶ್ರೀನಿವಾಸನ ಅವತಾರವಾಗಿ, ಆಕಾಶ ರಾಜನ ಮಗಳಾದ ಪದ್ಮಾವತಿಯನ್ನು ಕಲ್ಯಾಣವಾದ. ನಂತರ ಭಕ್ತರನ್ನು ಉದ್ದರಿಸುವುದಕ್ಕೆ ತಿರುಮಲದಲ್ಲಿ ನೆಲೆನಿಂತ ಎನ್ನುವ ನಂಬಿಕೆ ಭಕ್ತರದ್ದು.ಭಗವಂತನ ಲೀಲಾನಾಟಕವಾದ ಶ್ರೀನಿವಾಸ ಕಲ್ಯಾಣ, ಉಡುಪಿಯ ಕುಂಬಾಶಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಶ್ರೀನಿವಾಸ ಹಾಗೂ ಪದ್ಮಾವತಿ ಕಲ್ಯಾಣೋತ್ಸವ ಕಂಡು ಭಕ್ತರು ಪುಳಕಿತರಾದರು. ಶ್ರೀನಿವಾಸ ಕಲ್ಯಾಣದ ಕಾಲ್ಪನಿಕ ಮರು ಸೃಷ್ಟಿ ಭಕ್ತರನ್ನು ಬೆರಗುಗೊಳಿಸಿತು.

ಶ್ರೀವಾಸ ಕಲ್ಯಾಣೋತ್ಸವ ಅಪರೂಪದಲ್ಲಿ ನಡೆಯುವ ಕಾರಣ, ನೂರಾರು ಭಕ್ತರು ಸೇರಿದ್ದರು. ಗೋವಿಂದ ನಾಮಸ್ಮರಣೆ ಮಾಡುತ್ತಾ,ಗೋವಿಂದ ಗೋವಿಂದ ಎಂದು ಕಣಿದಾಡಿದರು. ಶ್ರೀನಿವಾಸ ಕಲ್ಯಾಣ ಕಣ್ತುಂಬಿಕೊಂಡರೆ, ಇಷ್ಟಾರ್ಥ ಸಿದ್ದಿ ಆಗುತ್ತೆ ಎನ್ನುವ ನಂಬಿಕೆ ಇದೆ. ವಿವಾಹ ಸೌಭಾಗ್ಯ, ಕಲ್ಯಾಣ ಭಾಗ್ಯ ಕೂಡಿ ಬರುತ್ತೆ ಎನ್ನುವ ನಂಬಿಕೆ ಕೂಡ‌ ಇದೆ.

ಕರಾವಳಿಯಲ್ಲಿ ಭಗವಂತನ ಲೀಲಾನಾಟಕವಾದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯುವುದು ಅಪರೂಪ. ಹೀಗಾಗಿ ಕುಂಬಾಶಿಯಲ್ಲಿ ನಡೆದ ಈ ವಿಶಿಷ್ಟ ಧಾರ್ಮಿಕ ಕಾರ್ಯಕ್ಕೆ ಸಾಕ್ಷಿಯಾದ ಭಕ್ತರು ಪುಳಕಗೊಂಡರು.

Edited By : Manjunath H D
Kshetra Samachara

Kshetra Samachara

22/01/2022 05:25 pm

Cinque Terre

13.46 K

Cinque Terre

0

ಸಂಬಂಧಿತ ಸುದ್ದಿ