ಮುಲ್ಕಿ: ಮಂಗಳೂರು ಶ್ರೀ ವೀರ ವೆಂಕಟೇಶ ದೇವಸ್ಥಾನಕ್ಕೆ ಕುಂದಾಪುರದ ಕೋಟೇಶ್ವರದಲ್ಲಿ ನಿರ್ಮಿಸಿದ ಬೃಹತ್ ಕಾಷ್ಠ ಶಿಲ್ಪ ರಥವನ್ನು ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಶ್ರೀ ವೆಂಕಟರಮಣ ದೇವಸ್ಥಾನದ ವತಿಯಿಂದ ವಾದ್ಯ ಘೋಷದೊಂದಿಗೆ ವಿಶೇಷವಾಗಿ ಸ್ವಾಗತಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ಮೂಲ್ಕಿ ಬಪ್ಪನಾಡು ಬಳಿ ಆಗಮಿಸಿದ ರಥಕ್ಕೆ ಹೂಹಾರಗಳಿಂದ ಸಿಂಗರಿಸಿ ಶ್ರೀ ದೇವಳದಿಂದ ತಂದ ತೀರ್ಥ ಪ್ರೋಕ್ಷಣೆ ನಡೆಸಿ ಬಳಿಕ ಆರತಿ ಎತ್ತಿ ಶ್ರೀ ದೇವರ ಅನುಗ್ರಹ ಪ್ರಸಾದ ನೀಡಲಾಯಿತು.
ಶ್ರೀ ಕ್ಷೇತ್ರದ ಹಿರಿಯ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭ ಶ್ರೀ ಕ್ಷೇತ್ರದ ಅರ್ಚಕವರ್ಗ,ಆಡಳಿತ ಸಮಿತಿ,ಭಜಕವೃಂದ ಹಾಜರಿದ್ದರು.
Kshetra Samachara
17/01/2022 08:00 pm