ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಸನ್ಮಾನ, ಸಾವರ್ಕರ್ ಮೊಮ್ಮಗನಿಂದ ಉಪನ್ಯಾಸ

ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದಲ್ಲಿ,ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ,ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು,ವಿವಿಧ ಕ್ಷೇತ್ರಗಳ ಸಾಧಕರನ್ನು ಇಂದು ಸನ್ಮಾನಿಸಿದರು.ಬಳಿಕ ಆಶೀರ್ವಚನ ನೀಡಿದ ಶ್ರೀಗಳು ,ಗೋವು ಭರಥದ ಏಕತೆಯ ಸಂಕೇತ,ಕನ್ಯಾಕುಮಾರಿಯಿಂದ ಹಿಮಾಲಯದ ತನಕ ಎಲ್ಲರೂ ಗೋವನ್ನು ಪೂಜಿಸುತ್ತಾರೆ. ಭಾರತದ ಹಿಂದಿನ ಪರಂಪರೆಯ ಬಗ್ಗೆ ಹೊಸ ಪೀಳಿಗೆಗೆ ಸರಿಯಾದ ತಿಳುವಳಿಕೆ ನೀಡಬೇಕಾದ ಹೊಣೆಗಾರಿಕೆ ಇಂದಿನವರಿಗೆ ಇದೆ.ಹಿಂದೂ ದೇಶದ ಅಸ್ತಿತ್ವದಿಂದಲೇ ಹಿಂದೂ ಧರ್ಮದ ಉಳಿವು ಎಂಬ ಅರಿವು ನಾವು ಹೊರಬೇಕಿದೆ ಎಂದು ಅನುಗ್ರಹ ಸಂದೇಶ ನೀಡಿದರು.

ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ವೇದಿಕೆಯಲ್ಲಿದ್ದರು.

ಪುಣೆಯ ಸಾತ್ಯಕಿ ಸಾವರ್ಕರ್ "ಭಾರತ ಮತ್ತು ಸಾವರ್ಕರ್" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪರ್ಯಾಯ ಮಠದ ಆಸ್ಥಾನ ವಿದ್ವಾಂಸರಾದ ವಿದ್ವಾನ್ ಕೃಷ್ಣರಾಜ ಕುತ್ಪಾಡಿಯವರು ಕಾರ್ಯಕ್ರಮ ನಿರ್ವಹಿಸಿದರು.ವಿಷ್ಣು ಹೆಬ್ಬಾರ್ ಮತ್ತು ಲೀಲಾಕ್ಷ ಕರ್ಕೇರ ಸಭೆಯಲ್ಲಿ ಭಾಗವಹಿಸಿದ್ದರು.

Edited By : Nagaraj Tulugeri
Kshetra Samachara

Kshetra Samachara

13/01/2022 10:44 pm

Cinque Terre

9.17 K

Cinque Terre

0

ಸಂಬಂಧಿತ ಸುದ್ದಿ