ಮುಲ್ಕಿ: ಇಂದಿನ ಶಿಕ್ಷಣ ಪದ್ದತಿ ಸರಿ ಇಲ್ಲದ ಕಾರಣ ನಾವು ಧಾರ್ಮಿಕತೆಯಿಂದ ದೂರ ಉಳಿದಿದ್ದೇವೆ ಎಂದು ಕೇಮಾರು ಸಾಂದೀಪಿನಿ ಮಠದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು
ಬಳಕುಂಜೆ ಕೋಟ್ನಾಯಗುತ್ತು ಭಾರತೀ ಪ್ರಜ್ಜಾಪೀಠದ ಕಲಾ ಮಠಪದಲ್ಲಿ, ಗಾಯತ್ರಿ ಜ್ಜಾನ ಪೀಠ ವತಿಯಿಂದ ಗಾಯತ್ರಿ ತೀರ್ಥ ಶಾಂತಿ ಕುಂಜ ಹರಿದ್ವಾರದ ತತ್ವಾವದಾನದಲ್ಲಿ ಯುಗಋಷಿ ಶ್ರೀ ರಾಮ ಶರ್ಮ ಆಚಾರ್ಯ ವಿರಚಿತ ಯುಗ ಸಾಹಿತ್ಯ ಋಷಿ ವಾಣಿ ಗ್ರಂಥ ಲೋಕಾರ್ಪಣಾ ಸಮಾರಂಭ ದಲ್ಲಿ ಮಾತನಾಡಿ ಮಕ್ಕಳಿಗೆ ಋಷಿ ಪರಂಪರೆ ಕಲಿಸಿ, ವಿಜ್ಜಾನದಿಂದ ದೂರವಿರಿ, ನೈವೇದ್ಯ ದೇವರಿಗೆ ಮುಟ್ಟುತ್ತದೆಯೋ ಇಲ್ಲವೋ ಗೊತ್ತಿಲ್ಲ ನಾವು ಮಾಡುವ ಸಾಮಾಜಿಕ ಕಾರ್ಯಕ್ಕೆ ದೇವರ ದಯೆ ಇದೆ ಎಂದರು.
ವಿರಾರ್ ಶಂಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಧಾರ್ಮಿಕತೆಯ ಈ ಗ್ರಂಥ ನಾನು ಪ್ರಕಾಶಕನಾಗಬೇಕಾದರೆ ಅದು ನನ್ನ ಬಾಗ್ಯ, ಉತ್ತಮ ಹುದ್ದೆಯವರಿಗೆ ಗೌರವ ಸಿಗುತ್ತೆ ಎಂಬ ಮತ್ಸರ ಬೇಡ, ನಾವೂ ಆ ಸ್ಥಾನಕ್ಕೆ ಏರಲು ಪ್ರಯತ್ನಿಸುವ, ಮೊಬೈಲ್ ಟಿ.ವಿ ಯಿಂದ ದೂರವಿದ್ದು ಇಂತಹ ಗ್ರಂಥ ಓದಿ ಜ್ಜಾನ ಹೆಚ್ಚಿಸುವ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಮತ್ತು ಗಾಯತ್ರಿ ಪ್ರಜ್ಜಾಪೀಠದ ಸ್ವರ್ಣ ಕುಮಾರಿ ಶೆಟ್ಟಿ ರವರನ್ನು ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಬಳ್ಕುಂಜೆ ಹಯಾತುಲ್ ಇಸ್ಲಾಂ ಮದ್ರಸದ ಧರ್ಮಗುರುಗಳಾದ ಹಾಫಿಳ್ ಹನೀಪ್ ಸ ಅದಿಅಬ್ದುಲ್ ಹನೀಪ್ ಬಳ್ಕುಂಜೆ, ಜಾಗತಿಕ ಬಂಟರ ಸಂಘಗಳ ಒಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಉಳೆಪಾಡಿ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಸ್ಥಾನದ ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
12/01/2022 08:39 pm