ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೋತ್ಸವ ಆರಂಭ

ಉಡುಪಿ: ಪೇಜಾವರ ಮಠದ ಪದ್ಮವಿಭೂಷಣ ಪುರಸ್ಕೃತ , ಕೀರ್ತಿ ಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೋತ್ಸವವು ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿರುವ ಅವರ ಮೂಲ ವೃಂದಾವನ ಸನ್ನಿಧಿಯಲ್ಲಿ ಆರಂಭಗೊಂಡಿತು. ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಈ ಮಹೋತ್ಸವವು ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾವಳಿಗಳ ಅನುಸಾರ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತಗೊಳಿಸಿ ಸರಳವಾಗಿ ನಡೆಸಲಾಗುತ್ತಿದೆ.

ಮಂಗಳವಾರ ಪೂರ್ವಾರಾಧನೆಯ ಅಂಗವಾಗಿ ವಿದ್ಯಾಪೀಠದ ಋತ್ವಿಜರಿಂದ ಶ್ರೀ ರಾಮ‌- ಕೃಷ್ಣ -ವೇದವ್ಯಾಸ - ನರಸಿಂಹ ಮಂತ್ರ ಹೋಮಗಳು ನೆರವೇರಿದವು.ಸಂಜೆ ವಿದ್ವತ್ಗೋ಼ಷ್ಠಿ ನಡೆಯಿತು.

ಉಡುಪಿ ಹಾಗೂ ಮಂಗಳೂರಿನ ಸಮೀಪದ ಪೇಜಾವರದಲ್ಲಿನ ಮಠಗಳು ಮತ್ತು ಶ್ರೀ ವಿಶ್ವೇಶತೀರ್ಥರು ಉತ್ತರದ ಬದರಿಯಿಂದ ದಕ್ಷಿಣದ ರಾಮೇಶ್ವರದವರೆಗೆ ಸಂಸ್ಥಾಪಿಸಿದ ಎಲ್ಲ ಸಂಘ ಸಂಸ್ಥೆಗಳು ಹಾಗೂ ಶ್ರೀಮಠದ ಶಾಖೆಗಳಲ್ಲೂ ಆರಾಧನೆಯ ನಿಮಿತ್ತ ಧಾರ್ಮಿಕ ವಿಧಿಗಳಿಗೆ ಸೀಮಿತಗೊಳಿಸಿ ಗುರು ಸ್ಮರಣೆ ನಡೆಯಲಿದೆ ಎಂದು ಪೇಜಾವರ ಮಠದ ಪ್ರಕಟಣೆ ತಿಳಿಸಿದೆ.

Edited By : Nagaraj Tulugeri
Kshetra Samachara

Kshetra Samachara

04/01/2022 12:43 pm

Cinque Terre

6.67 K

Cinque Terre

0

ಸಂಬಂಧಿತ ಸುದ್ದಿ