ಕಾಪು: ಕರಾವಳಿಯಲ್ಲಿ ಇಂದು ಎಳ್ಳಮವಾಸ್ಯೆ ವಿಶೇಷ ದಿನದ ಆಚರಣೆ ನಡೆಯುತ್ತಿದೆ. ಉಡುಪಿ ಜಿಲ್ಲೆಯುದ್ದಕ್ಕೂ ಸಾವಿರಾರು ಜನರು ಸಮುದ್ರ ಸ್ನಾನ ಮಾಡಿದರು. ಉಡುಪಿಯ ಅಷ್ಟಮಠಗಳ ನಾಲ್ವರು ಸ್ವಾಮೀಜಿಗಳೂ ಪವಿತ್ರ ಸಮುದ್ರ ಸ್ನಾನ ಮಾಡಿದರು.
ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮತ್ತು ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಕಾಪುವಿನಲ್ಲಿ ಸಮುದ್ರ ಸ್ನಾನ ಮಾಡಿದರು.
ಈ ಸಂದರ್ಭ ಮಠದ ಭಕ್ತರು ಮತ್ತು ಕಾಪು- ಕಟಪಾಡಿ ಭಾಗದ ಗ್ರಾಮಸ್ಥರು ಸ್ಥಳದಲ್ಲಿದ್ದು, ಸ್ವಾಮೀಜಿಗಳ ಜೊತೆ ಸಮುದ್ರ ಸ್ನಾನದಲ್ಲಿ ಭಾಗಿಯಾದರು. ಎಳ್ಳಮವಾಸ್ಯೆಯ ದಿನ ಸಮುದ್ರದ ನೀರಿನಲ್ಲಿ ವಿಶೇಷ ಗುಣಗಳು ಇರುತ್ತವೆ ಎಂಬ ನಂಬಿಕೆ ಇದೆ. ಸಮುದ್ರ ಸ್ನಾನದ ನಂತರ ಸ್ವಾಮೀಜಿಗಳು ನಾಡದೋಣಿಯಲ್ಲಿ ಕೆಲಕಾಲ ವಿಹಾರ ನಡೆಸಿದರು.
Kshetra Samachara
02/01/2022 03:43 pm