ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಬಲವಂತದ ಮತಾಂತರ ಸಲ್ಲದು" ಸಿದ್ದರಾಮಯ್ಯ ಹೇಳಿಕೆ ಸ್ವಾಗತಿಸುತ್ತೇವೆ; ಪೇಜಾವರ ಶ್ರೀ

ಮಂಗಳೂರು: ಮತಾಂತರದ ಹಾವಳಿಯಿಂದಾಗಿ ಅನೇಕ ಕಡೆ ಕುಟುಂಬಗಳು ಒಡೆದು ಹೋಗ್ತಾ ಇದೆ. ಇದರಿಂದಾಗಿ ಗಂಡ-ಹೆಂಡತಿಯರು, ಮಕ್ಕಳು- ಹೆತ್ತವರು ದೂರ ಆಗುತ್ತಿದ್ದಾರೆ. ಅಲ್ಲದೆ, ಕುಟುಂಬವೇ ಸರ್ವನಾಶ ಆಗಿರೋದು ನಗರದಲ್ಲೇ ಕಂಡು ಬಂದಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖೇದ ವ್ಯಕ್ತಪಡಿಸಿದರು.

ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಮತಾಂತರಕ್ಕೆ ಖಂಡಿತವಾಗಿಯೂ ಕಡಿವಾಣ ಹಾಕಬೇಕು. ಮತಾಂತರ ಕಾಯ್ದೆ ಮಸೂದೆ ಆದಷ್ಟು ಬೇಗ ಜಾರಿಗೆ ಬರಬೇಕು ಎಂದು ಶ್ರೀಗಳು ಆಗ್ರಹಿಸಿದರು.

ಮಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸ್ವಾಮೀಜಿ, ಮಾಜಿ ಸಿಎಂ ಸಿದ್ದರಾಮಯ್ಯನವರು ಬಲವಂತದ ಮತಾಂತರವನ್ನು ನಾವು ಕೂಡ ಒಪ್ಪುವುದಿಲ್ಲ ಎಂದು ನೀಡಿರುವ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ ಎಂದರು.

Edited By : Shivu K
Kshetra Samachara

Kshetra Samachara

29/12/2021 08:18 pm

Cinque Terre

25.5 K

Cinque Terre

2

ಸಂಬಂಧಿತ ಸುದ್ದಿ