ಕೊಕ್ಕಡ: ಕೇರಳದ ಪ್ರಸಿದ್ಧ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಕೊಕ್ಕಡ ಮೂಲದ ಪ್ರವೀಣ್ ಎಡಪಡಿತ್ತಾಯ ನೇಮಕಗೊಂಡಿದ್ದಾರೆ.
ಇವರು ಕೊಕ್ಕಡ ಸಮೀಪದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪಿಲತಿಂಜ ನಿವಾಸಿ. ಅವರ ಅಜ್ಜ ವೆಂಕಟರಮಣ ಎಡಪಡಿತ್ತಾಯ, ದೊಡ್ಡಪ್ಪ ನಾರಾಯಣ ಎಡಪಡಿತ್ತಾಯ, ಹಾಗೂ ಚಿಕ್ಕಪ್ಪ ಗೋವಿಂದ ಎಡಪಡಿತ್ತಾಯ ಕೂಡ ಕೇರಳದ ತಿರುವನಂತಪುರದಲ್ಲಿರುವ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರವೀಣ ಎಡಪಡಿತ್ತಾಯ ಅವರು ಮೂಲತಃ ಕೃಷಿಕರಾಗಿದ್ದು ಪೌರೋಹಿತ್ಯ ಕಲಿತಿದ್ದರು. ಇವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
ಕೊಕ್ಕಡದ ಯಡಪಡಿತ್ತಾಯ, ಶಬರಾಯ, ಉಪ್ಪಾರ್ಣ, ಬಾಳ್ತಿಲ್ಲಾಯ, ತೋಡ್ತಿಲ್ಲಾಯ ಕುಲದ ಸದಸ್ಯರಿಗೆ ಈ ಹಿಂದಿನಿಂದಲೂ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಹಕ್ಕು ಇದೆ.
Kshetra Samachara
12/12/2021 01:45 pm