ಕಾರ್ಕಳ: ಕಾರ್ಕಳದ ಪಡುತಿರುಪತಿ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನವಾಗುತ್ತಿದೆ.ಇಲ್ಲಿ ಏಕಕಾಲದಲ್ಲಿ ಸಾವಿರಾರು ಹಣತೆಗಳನ್ನು ಬೆಳಗಿ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.ಮುಂಜಾನೆಯಿಂದ ದೀಪೋತ್ಸವ ನಡೆಯುತ್ತಿದ್ದು,ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ದೇವಾಲಯದ ಆವರಣ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ದೀಪಗಳನ್ನು ಹಚ್ಚಲಾಗಿದ್ದು ಕಣ್ಮನ ಸೂರೆಗೊಳ್ಳುತ್ತಿವೆ. ಈ ಸಂದರ್ಭದಲ್ಲಿ ದೇವರಿಗೆ ವಿಶೇಷ ಪೂಜೆ ಮತ್ತು ಉತ್ಸವ ಸೇವೆ ಸಲ್ಲಿಕೆಯಾಯಿತು.ಕಾರ್ಕಳದ ವೆಂಕಟರಮಣ ದೇವಸ್ಥಾನ ಪಡುತಿರುಪತಿ ಎಂದೇ ಖ್ಯಾತಿ ಪಡೆದಿರುವ ದೇವಸ್ಥಾನವಾಗಿದೆ.
Kshetra Samachara
08/11/2021 07:56 pm