ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೃಷ್ಣಾಪುರ ಮಠಾಧೀಶರಿಂದ ಶಾಸಕ ರಘುಪತಿ ಭಟ್ ಮನೆಯಲ್ಲಿ ಪಟ್ಟದ ದೇವರಿಗೆ ಪೂಜೆ

ಕರಂಬಳ್ಳಿ: ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ತಮ್ಮ ಚತುರ್ಥ ಶ್ರೀ ಕೃಷ್ಣಪೂಜಾ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಇಂದು ಶಾಸಕ ರಘುಪತಿ ಭಟ್ ಮನೆಯಲ್ಲಿ ತಮ್ಮ‌ ಪಟ್ಟದ ದೇವರ ಪೂಜೆ ನಡೆಸಿದರು.

ಬಳಿಕ ಭಿಕ್ಷೆ ಹಾಗೂ ಗುರುವಂದನೆ ಸ್ವೀಕರಿಸಿ ಅನುಗ್ರಹಿಸಿದರು.

ಶಾಸಕ ರಘುಪತಿ ಭಟ್ ತೀರ್ಥರೂಪರಾದ ದಿ. ಶ್ರೀನಿವಾಸ ಬಾರಿತ್ತಾಯರು ಮಠದಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಆ ಹಿನ್ನೆಲೆಯಲ್ಲಿ ಮಠಕ್ಕೂ ಶಾಸಕರ ಮನೆಗೂ ಅನೇಕ ವರ್ಷಗಳ ಆತ್ಮೀಯ ಬಾಂಧವ್ಯವಿದೆ. ಈ ಹಿನ್ನೆಲೆಯಲ್ಲಿ ತಮ್ಮ ಚತುರ್ಥ ಪರ್ಯಾಯೋತ್ಸವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿ ಶಾಸಕರು ಸೇವೆ ಸಲ್ಲಿಸಲು ಶ್ರೀಪಾದರು ಅವಕಾಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಂದಿನ ಕಾರ್ಯಕ್ರಮದಲ್ಲಿ ಪರ್ಯಾಯೋತ್ಸವ ಸಮಿತಿ ಅಧ್ಯಕ್ಷರಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

19/10/2021 10:32 pm

Cinque Terre

19.48 K

Cinque Terre

0

ಸಂಬಂಧಿತ ಸುದ್ದಿ