ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸರಕಾರದಿಂದಲೇ 'ಜಗದ್ಗುರು ಮಧ್ವ ಜಯಂತ್ಯುತ್ಸವ' ನಡೆಯಲಿ; ಪಲಿಮಾರು ಶ್ರೀ

ಉಡುಪಿ: ಕರ್ನಾಟಕದಲ್ಲಿ ಅವತರಿಸಿದ ಮಹಾ ದಾರ್ಶನಿಕ ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಸರ್ಕಾರವೇ ಆಚರಿಸಲಿ ಎಂದು

ಪಲಿಮಾರು ಮಠಾಧೀಶರು ಒತ್ತಾಯಿಸಿದ್ದಾರೆ.

ಭಾರತದಲ್ಲಿ ಅವತರಿಸಿದ ಅನೇಕ ದಾರ್ಶನಿಕರಲ್ಲಿ ಅದರಲ್ಲೂ ಆಚಾರ್ಯತ್ರಯರಲ್ಲಿ ಶ್ರೀ ಮಧ್ವಾಚಾರ್ಯರು ಪ್ರಮುಖರು. ಸರಳ ಭಕ್ತಿ ಸಿದ್ಧಾಂತವನ್ನು ಪ್ರತಿಪಾದಿಸಿ, ಕನ್ನಡದ ನೆಲದಲ್ಲಿ ಹರಿದಾಸ ಸಾಹಿತ್ಯ ಸಮೃದ್ಧವಾಗಿ ಬೆಳೆಯಲು ಮೂಲ ಕಾರಣರು. ಇದಲ್ಲದೆ ಉಡುಪಿಯಲ್ಲಿ ಶ್ರೀ ಕೃಷ್ಣನನ್ನು ಪ್ರತಿಷ್ಠಾಪಿಸುವ ಮೂಲಕ ನಾಡಿನ ಕೀರ್ತಿಯನ್ನು ಬೆಳಗಿದವರು ಜಗದ್ಗುರು ಶ್ರೀ ಮಧ್ವಾಚಾರ್ಯರು. ಇಂತಹ ಮಹನೀಯರ ಜಯಂತಿಯನ್ನು ಸರ್ಕಾರ ಆಚರಿಸುವಂತಾಗಬೇಕು. ಸರ್ಕಾರ ಅನೇಕ ಮಹಾತ್ಮರ ಜಯಂತಿ, ಪುಣ್ಯತಿಥಿಗಳನ್ನು ಆಚರಿಸುವಂತೆ ಮಧ್ವ ಜಯಂತಿಯನ್ನೂ ಆಚರಿಸಬೇಕು ಎಂದು ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸರಕಾರವನ್ನು ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

15/10/2021 05:02 pm

Cinque Terre

16.23 K

Cinque Terre

1

ಸಂಬಂಧಿತ ಸುದ್ದಿ