ಮುಲ್ಕಿ: ಇತಿಹಾಸ ಪ್ರಸಿದ್ಧ ಒಂಬತ್ತು ಮಾಗಣೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹಗಲು ಧ್ವಜಾರೋಹಣ ನಡೆದು, ಪಲ್ಲಪೂಜೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಶುಕ್ರವಾರ ಬೆಳಿಗ್ಗೆ 11ಕ್ಕೆ ದೇವಳದ ತಂತ್ರಿಗಳಾದ ವೇದವ್ಯಾಸ ತಂತ್ರಿಗಳು ಧ್ವಜಸ್ತಂಭದ ಬಳಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ದೇವಳದಲ್ಲಿ ಇಂದು ರಾತ್ರಿ ಉತ್ಸವ ಬಲಿ ನಡೆಯಲಿದ್ದು, ಶನಿವಾರ ಬೆಳಿಗ್ಗೆ ಚಂಡಿಕಾ ಯಾಗ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ 4 ಗಂಟೆಗೆ ದೇವರ ಬಲಿ ಉತ್ಸವ ನಡೆದು, ಪಂಜಿನಡ್ಕ ಪೇಟೆ ಸವಾರಿ ನಡೆಯಲಿದೆ ಎಂದರು.
ಪಂ. ಸದಸ್ಯ ಕೃಷ್ಣ ಅಂಗರಗುಡ್ಡೆ, ಪದ್ಮಿನಿ ಶೆಟ್ಟಿ, ಮಾಜಿ ಮುಖ್ಯಾಧಿಕಾರಿ ಹರಿಶ್ಚಂದ್ರ ಸಾಲಿಯಾನ್, ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ, ಮುಲ್ಕಿ ಠಾಣೆ ಎಎಸ್ಸೈ ಚಂದ್ರಶೇಖರ್, ಸಾಮಾಜಿಕ ಕಾರ್ಯಕರ್ತ ಸುಧೀರ್ ಅಂಗರಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/02/2021 07:42 pm