ಮುಲ್ಕಿ: ಕಟೀಲು ಸಮೀಪದ ಎಕ್ಕಾರು ತಾಂಗಾಡಿ ಕರೆಯ ಗಡುಪಾಡಿ ನೇಮೋತ್ಸವ ಎಕ್ಕಾರು ಪಡ್ಡಾಯಿಗುಡ್ಡೆಯಲ್ಲಿ ಮಂಗಳವಾರ ರಾತ್ರಿ ಜರುಗಿತು.ಈ ಸಂದರ್ಭ ಶ್ರೀ ಕೊಡಮಣಿಂತ್ತಾಯ ಹಾಗೂ ಶ್ರೀ ಪಿಲಿ ಚಾಮುಂಡಿ ದೈವದ ನೇಮ ನಡೆಯಿತು.
ಗಡುಪಾಡಿ ನೇಮೋತ್ಸವದಲ್ಲಿ ಎಕ್ಕಾರು ಶ್ರೀ ಕೃಷ್ಣಮಠದ ವೇ.ಮೂ. ಹರಿದಾಸ ಉಡುಪ ಆಶೀರ್ವಚನ ನೀಡಿ, ಅನಾದಿ ಕಾಲದಿಂದಲೂ ನೇಮೋತ್ಸವ ನಡೆಯುತ್ತಾ ಬಂದಿದ್ದು, ಭಕ್ತಿ ಶ್ರದ್ಧೆ ಹಾಗೂ ಸ್ವಚ್ಛತೆಯ ಮೂಲಕ ಕೊರೊನಾವನ್ನು ವಿಶ್ವ ದಿಂದಲೇ ಹಿಮ್ಮೆಟ್ಟಿಸೋಣ ಎಂದರು.
ಈ ಸಂದರ್ಭ ಎಕ್ಕಾರು ಶ್ರೀ ಕೊಡಮಣಿಂತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರ ಮನೆ(ತಿಮ್ಮ ಕಾವ), ನಾಲ್ಕು ಕರೆಗಳ ಮೊಕ್ತೇಸರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
29/01/2021 01:37 pm