ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ನವರಾತ್ರಿ ರಥೋತ್ಸವ:ಸೀಮಿತ ಭಕ್ತರು ಭಾಗಿ

ಕೊಲ್ಲೂರು: ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ಶನಿವಾರ ರಾತ್ರಿ ನವರಾತ್ರಿ ಪ್ರಯುಕ್ತ ರಥೋತ್ಸವ ಸಂಪನ್ನಗೊಂಡಿತು. ಈ ಬಾರಿ ಕೊರೊನಾ ಕಾರಣದಿಂದಾಗಿ ರಥೋತ್ಸವಕ್ಕೆ ಹೆಚ್ಚಿನ ಭಕ್ತರು ಇರಲಿಲ್ಲ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸಂಬಂಧಪಟ್ಟವರು ಮತ್ತು ದೇವಸ್ಥಾನದ ಅರ್ಚಕ ವೃಂದ,ಸಿಬ್ಬಂದಿ ಮತ್ತವರ ಕುಟುಂಬಸ್ಥರು ಮಾತ್ರ ರಥೋತ್ಸವಕ್ಕೆ ಸಾಕ್ಷಿಯಾದರು.

ವರ್ಷಂಪ್ರತಿ ಇಲ್ಲಿ ಪುಷ್ಪ ರಥೋತ್ಸವ ಮಾಡುವುದು ವಾಡಿಕೆ. ಆದರೆ, ಈ ಬಾರಿ ಚಿನ್ನದ ರಥದಲ್ಲಿ ದೇವರ ಮೂರ್ತಿಯನ್ನಿಟ್ಟು ರಥೋತ್ಸವ ನಡೆಸಲಾಯಿತು. ವಾಡಿಕೆಯಂತೆ ನವರಾತ್ರಿ ಉತ್ಸವ ನಡೆಸಲು ಕೋವಿಡ್ ನಿಯಮಾವಳಿ ಅಡ್ಡಿ ಇರುವುದರಿಂದ ನವರಾತ್ರಿಯ ಎಲ್ಲ ದಿನವೂ ದೇವರಿಗೆ ಸಲ್ಲಬೇಕಾದ ಪೂಜೆ ಮತ್ತು ಧಾರ್ಮಿಕ ವಿಧಿಗಳನ್ನಷ್ಟೇ ನಡೆಸಲಾಗಿದೆ.ವಿಜಯದಶಮಿ ದಿವಸ ಇಲ್ಲಿ ವಿದ್ಯಾರಂಭ ನಡೆಯಲಿದ್ದು, ಅದರಲ್ಲೂ ಸೀಮಿತ ಭಕ್ತರಿಗಷ್ಟೇ ಅವಕಾಶ ನೀಡಲಾಗಿದೆ.

Edited By : Manjunath H D
Kshetra Samachara

Kshetra Samachara

25/10/2020 12:50 pm

Cinque Terre

22.28 K

Cinque Terre

2

ಸಂಬಂಧಿತ ಸುದ್ದಿ