ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕವತ್ತಾರು:"ಅಂಗನವಾಡಿಗೆ ಕಳಪೆ ಗುಣಮಟ್ಟದ ಆಹಾರ ಸರಬರಾಜಾದರೆ ಕ್ರಮ": ಉಮಾನಾಥ್

ಮುಲ್ಕಿ:ಸರಕಾರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಅಂಗನವಾಡಿ ಕೇಂದ್ರಕ್ಜೆ ಮಕ್ಕಳಿಗೆ ಗುಣಮಟ್ಟದ ಆಹಾರ ಸರಬರಾಜು ಮಾಡಲಾಗುತಿದೆ ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಅವರು ಕವತ್ತಾರಿನಲ್ಲಿ ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಶಿಕ್ಷಕರು ಮಕ್ಕಳನ್ನು ಮನೆ ಮಕ್ಕಳಂತೆ ನೊಡಿಕೊಳ್ಳಬೇಕು, ಸರಿಯಾದ ರೀತಿಯಲ್ಲಿ ಆಹಾರ ನೀಡಬೇಕು, ಯಾವುದೇ ಕಳಪೆ ಗುಣಮಟ್ಟದ ಆಹಾರ ಸರಬರಾಜಾದರೆ ಕೂಡಲೇ ತಿಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭ ಅಂಗನವಾಡಿ ಕೇಂದ್ರಕ್ಕೆ ಜಮೀನು ನೀಡಿದ ದಾನಿಗಳಾದ ಕಲ್ಯಾಣಿ ಲಕ್ಷಣ ರಾವ್ ಅವರನ್ನು ಸನ್ಮಾನಿಸಲಾಯಿತು, ಗುತ್ತಿಗೆದಾರ ಅರುಣ್ ರನ್ನು ಗೌರವಿಸಲಾಯಿತು.ಈ ಸಂದರ್ಭ ಬಳ್ಕುಂಜೆ ಪಂಚಾಯತ್ ಅಧ್ಯಕ್ಷೆ ಮಮತಾ ಪೂಂಜ, ಉಪಾಧ್ಯಕ್ಷ ಆನಂದ, ಸದಸ್ಯರಾದ ನವೀನ್ , ಬಾಸ್ಕರ ಕೋಟ್ಯಾನ್, ಗೀತಾ, ವೈದ್ಯಾಧಿಕಾರಿ ಬಾಸ್ಕರ ಕೋಟ್ಯಾನ್, ಶಿಶು ಅಭಿವೃದ್ದಿ ಅಧಿಕಾರಿ ಹರೀಶ್ ಕೆ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಪ್ರಕಾಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ್ ಬೊಳ್ಳೂರು, ಬಳ್ಕುಂಜೆ ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದು. ಶಿಶು ಅಭಿವೃದ್ದಿ ಅಧಿಕಾರಿ ಶೈಲಾ ಪ್ರಸ್ತಾವನೆಗೈದರು. ಪ್ರಮೀಳಾ ಸ್ವಾಗತಿಸಿ,ಇಂದಿರಾ ಧನ್ಯವಾದ ಸಮರ್ಪಿಸಿದರು, ಅರುಣ್ ಉಲ್ಲಂಜೆ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

13/10/2022 11:44 am

Cinque Terre

3.97 K

Cinque Terre

0

ಸಂಬಂಧಿತ ಸುದ್ದಿ