ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಶ್ರೀ ಜನಾರ್ದನ ದೇಗುಲ, ಹೊಸ ಮಾರಿಗುಡಿಗೆ ಮುತಾಲಿಕ್ ಭೇಟಿ, ಪ್ರಾರ್ಥನೆ

ಪ್ರಖರ ಹಿಂದುತ್ವವಾದಿ, ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಇಂದು ಸಾವಿರ ಸೀಮೆಯ ಒಡೆಯ ಶ್ರೀ ಜನಾರ್ದನ ದೇಗುಲ ಹಾಗೂ ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.

ಶ್ರೀ ಜನಾರ್ದನ ದೇಗುಲದಲ್ಲಿ ವೇದಮೂರ್ತಿ ಜನಾರ್ದನ ತಂತ್ರಿಯವರು ಮುತಾಲಿಕ್‌ ಅವರಿಗೆ ಶಾಲು ಹೊದಿಸಿ, ಸನ್ಮಾನಿಸಿ ಪ್ರಸಾದ ನೀಡಿದರು. ಕಾಪು ಹೊಸ ಮಾರಿಯಮ್ಮ ದೇವಸ್ಥಾನದಲ್ಲಿ ವೇದಮೂರ್ತಿ ಶ್ರೀನಿವಾಸ ತಂತ್ರಿ ಅವರು ಶಾಲು ಹೊದಿಸಿ, ಸನ್ಮಾನಿಸಿ ಶ್ರೀದೇವಿಯ ಪ್ರಸಾದ ನೀಡಿದರು.

ಈ ಸಂದರ್ಭ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ, ಮೋಹನ ಭಟ್, ಜಯರಾಮ್ ಅಂಚಿಕಲ್ಲು, ಶರತ್, ಲಕ್ಷ್ಮೀಶ ಕಾಪು, ಸುದರ್ಶನ್ ಕಪ್ಪೆಟ್ಟು, ದಿವಾಕರ್, ರಾಧಾಕೃಷ್ಣ, ಸುಜಿತ್ ನಿಟ್ಟೂರು, ರಮೇಶ್ ಹೆಗ್ಡೆ ಕಲ್ಯ, ಗೋವರ್ಧನ್ ಶೇರಿಗಾರ್, ಶ್ರೀಧರ್ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.

Edited By :
PublicNext

PublicNext

03/10/2022 08:47 pm

Cinque Terre

30.99 K

Cinque Terre

2

ಸಂಬಂಧಿತ ಸುದ್ದಿ