ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಸಮಾನ ಮನಸ್ಕರ ದಾನಿಗಳಿಗೆ ಕಾಯುತ್ತಿರುವ ಇಳಿವಯಸ್ಸಿನ ಅಜ್ಜಿ; ಚಂದು ಪೂಜಾರ್ತಿ

ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರದ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಬೈಲು ಗೋಳಿಹಕ್ಲು ಚಂದು ಪೂಜಾರ್ತಿ (73) ಪ್ರಾಯದ ಇಳಿ ವಯಸ್ಸಿನ ಅಜ್ಜಿ ಓರ್ವರು ಏಕಾಂಗಿ ಜೀವನ ಸಾಗಿಸುತ್ತಿದ್ದಾರೆ ಈ ದಿನದಲ್ಲೂ ಅಜ್ಜಿ ವಾಸಿಸುವ ಮನೆ ನೋಡಿದರೆ ಕರುಳು ಕಿತ್ತು ಬರುವಂತಿತ್ತು ಮನೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ,

ಪ್ರತಿಯೊಬ್ಬ ಮನುಷ್ಯನಿಗೆ ಆಸೆ ಎನ್ನುವುದು ಸಹಜ ಗುಣ ಇಳಿವಯಸ್ಸಿನಲ್ಲಿ ಅಜ್ಜಿಗೊಂದು ನೂತನ ಮನೆ ನಿರ್ಮಾಣ ಕಟ್ಟಿಸಿ ಕೊಡಬೇಕೆಂದು ಕಲ್ಪಿಸುವ ಕಾರ್ಯಕ್ಕೆ ಸಮಾನ ಮನಸ್ಕರ ಯುವಕರು ತಂಡ ಮುಂದಾಗಿದ್ದು ಈ ಪುಣ್ಯ ಕಾರ್ಯಕ್ಕೆ ದಾನಿಗಳು ಕೈ ಜೋಡಿಸಬೇಕಾಗಿದೆ.

ನಾಡ ಗ್ರಾಮದ ತೆಂಕಬೈಲು ಗೋಳಿಹಕ್ಲು 5.ಸೆಂಟ್ಸ್ ಕಾಲೋನಿಯಲ್ಲಿ ವಾಸಮಾಡುತ್ತಿರುವ ಚಂದು ಅಜ್ಜಿಗೆ ಮಕ್ಕಳಿಲ್ಲ, ಅವರ ಪತಿ ನಿಧನರಾಗಿ 30 ವರ್ಷಗಳು ಕಳೆದು ಹೋಗಿದೆ ಕಳೆದ 30 ವರ್ಷಗಳಿಂದ ಒಬ್ಬಂಟಿಯಾಗಿ ಅಜ್ಜಿ ವಾಸಮಾಡುತ್ತಿದ್ದಾರೆ ಹಲವಾರು ವರ್ಷಗಳ ಹಿಂದೆ ಈ ಮಹಾತಾಯಿ ಮಣ್ಣಿನ ಇಟ್ಟಿಗೆಯಿಂದ ಕಟ್ಟಿದ ಮನೆ ಇದಾಗಿದ್ದು ಹಾವು ಚೇಳು ಮನೆ ಒಳಗೆ ಬಾರದಂತೆ ರಕ್ಷಣೆಗೆ ಕಿಟಕಿ ಬಾಗಿಲುಗಳಿಲ್ಲ,ಮನೆ ಎದುರುಗಡೆ ತೆಂಗಿನ ಗರಿಯ ತಟ್ಟಿಯನ್ನು ಕಟ್ಟಲಾಗಿದೆ.

ಸಂಪೂರ್ಣ ಶಿಥಿಲಗೊಂಡಿರುವ ಈ ಸಣ್ಣ ಗುಡಿಸಲು ಯಾವುದೇ ಕ್ಷಣದಲ್ಲಾದರೂ ಉದುರಿ ಬೀಳುವ ಪರಿಸ್ಥಿಯಲ್ಲಿದೆ ಈ ಮಳೆಗಾಲದಲ್ಲಿ ಮನೆ ಮೇಲಿನ ಮಾಡಿಗೆಗೆ ಸ್ಥಳೀಯರ ಸಹಕಾರದಿಂದ ಟಾರ್ಪಲ್ ಹೋದಿಕೆಯನ್ನು ಹಾಕಲಾಗಿದೆ.

ತಿಂಗಳಿಗೆ ಬರುತ್ತಿರುವ ಸಂಧ್ಯಾ ಸುರಕ್ಷಾ ಹಣದಿಂದ ಅಜ್ಜಿ ಜೀವನ ನಿರ್ವಹಣೆ ಸಾಗುತ್ತಿದೆ ಸೊಸೈಟಿಯಲ್ಲಿ ಸಿಗುತ್ತಿರುವ ಅಕ್ಕಿಯೇ ಅಜ್ಜಿಯ ಜೀವನಕ್ಕೆ ಆಧಾರ ಶೌಚಾಲಯದ ವ್ಯವಸ್ಥೆ ಕೂಡ ಅಜ್ಜಿ ಮನೆಯಲ್ಲಿ ಈತನಕ ಇಲ್ಲ ಅಜ್ಜಿಯ ಆರೋಗ್ಯವು ಕೂಡ ಹದಗೆಟ್ಟಿದ್ದು ದೈಹಿಕವಾಗಿ ಅಶಕ್ತರಾಗಿದ್ದಾರೆ ಅಧಿಕಾರಿ ವರ್ಗದವರನ್ನು ಸಂಪರ್ಕಿಸಿ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲುವಷ್ಟು ಶಕ್ತರಿಲ್ಲ ಚೆಂದು ಅಜ್ಜಿಗೆ ದಾನಿಗಳ ಸಹಕಾರದ ಅವಶ್ಯಕತೆ ಇದೆ ಮನೆಗೆ ವಿದ್ಯುತ್ ಲೈನ್ ತುಂಡಾಗಿ ಬಿದ್ದು ಎರಡು ವರ್ಷಗಳು ಕಳೆದು ಹೋಗಿದೆ ವಿದ್ಯುತ್ ದೀಪದ ಸೌಲಭ್ಯವಿಲ್ಲದೆ ಕಳೆದೆರಡು ವರ್ಷಗಳಿಂದ ಅಜ್ಜಿ ಕತ್ತಲೆಯಲ್ಲಿ ಬದುಕುನ್ನು ಕಳೆಯುತ್ತಿದ್ದಾರೆ.

ಅಜ್ಜಿಯ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡ ಬಯಸುವವರು ನೆರವಾಗಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಹುದಾಗಿದೆ.

ಹೆಸರು:ಚೆಂದು ಪೂಜಾರ್ತಿ,ಬ್ಯಾಂಕ್ ಹೆಸರು:ಬ್ಯಾಂಕ್ ಆಫ್ ಬರೋಡಾ, 20-81920100008241FSC Code – BARBOVJNADA

Edited By :
PublicNext

PublicNext

01/10/2022 02:10 pm

Cinque Terre

40.5 K

Cinque Terre

4

ಸಂಬಂಧಿತ ಸುದ್ದಿ