ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ಸಹಯೋಗದೊಂದಿಗೆ ನವರಾತ್ರಿ ಉತ್ಸವವನ್ನು ಈ ಬಾರಿ ‘ಉಚ್ಚಿಲ ದಸರಾ ಉತ್ಸವ-2022’ ಎಂದು ಆಚರಿಸಲು ಮೊಗವೀರ ಮಹಾಜನ ಸಂಘ ನಿರ್ಧರಿಸಿದೆ ಎಂದು ನಾಡೋಜ ಡಾ.ಜಿ ಶಂಕರ್ ಹೇಳಿದರು.
ದೇವಳದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದೇವಸ್ಥಾನದ ಪಕ್ಕದಲ್ಲಿ ನೂತನವಾಗಿ ನಿರ್ಮಾಣವಾದ ಸುಸಜ್ಜಿತ ಶ್ರೀಮತಿ ಶಾಲಿನಿ ಡಾ.ನಾಡೋಜ ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ನವದುರ್ಗೆಯರ ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳ ಪ್ರತಿಷ್ಠಾಪನೆಯೊಂದಿಗೆ ಸಪ್ಟೆಂಬರ್ 26ರಿಂದ ಅಕ್ಟೋಬರ್ 5 ರ ವರೆಗೆ ದಸರಾ ಉತ್ಸವ ಸಂಪನ್ನಗೊಳ್ಳಲಿದೆ ಎಂದರು.
ದಿನಾಂಕ:26-09-2022ರ ಬೆಳಿಗ್ಗೆ 9.05ಕ್ಕೆ ಸರಿಯಾಗಿ ನೂತನವಾಗಿ ಸುಮಾರು ರೂ.1 ಕೋಟಿ 70 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ “ಶ್ರೀಮತಿ ಶಾಲಿನಿ ಡಾ.ಜಿ ಶಂಕರ್ ತೆರೆದ ಸಭಾಂಗಣ ಲೋಕರ್ಪಣಾ ಕಾರ್ಯಕ್ರಮ ನಡೆಯಲಿದ್ದು, ಸಮಾಜ ಬಾಂಧವರ ಉಪಸ್ಥಿಯಲ್ಲಿ ನಾಡೋಜ ಡಾ. ಜಿ. ಶಂಕರ್ ರವರು ಸಭಾಂಗಣವನ್ನು ಉದ್ಘಾಟಿಸಲಿದ್ದಾರೆ.
ತಾ-26-09-2022ರ ಬೆಳಿಗ್ಗೆ 9.30ಕ್ಕೆ ಸರಿಯಾಗಿ ನವದುರ್ಗೆಯರು ಮತ್ತು ಶಾರದಾ ದೇವಿಯರ ಪ್ರತಿಷ್ಠಾಪನಾ ಕಾರ್ಯಕ್ರಮ ನೂತನ ಸಭಾಂಗಣದಲ್ಲಿ ನೆರವೇರಲಿದೆ ಎಂದು ಮಾಹಿತಿ ನೀಡಿದರು.
Kshetra Samachara
23/09/2022 04:35 pm