ಮಂಗಳೂರು: ಸುರತ್ಕಲ್ ಟೋಲ್ ಗೇಟ್ ತೆರವು ದಿನಾಂಕ ಘೋಷಣೆ ಬೇಡಿಕೆ ಮುಂದಿಟ್ಟು ಸೆ. 13 ರಂದು ಸುರತ್ಕಲ್ ಟೋಲ್ ಗೇಟ್ ಮುಂಭಾಗ ನಡೆಯಲಿರುವ ಸಾಮೂಹಿಕ ಧರಣಿ ಯಶಸ್ಸಿಗೆ ಮಂಗಳೂರು ವಿಕಾಸ ಕಚೇರಿಯಲ್ಲಿ ಸಭೆ ನಡೆಯಿತು.
ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ ಅಕ್ರಮ ಟೋಲ್ ತೆರವಿಗೆ ನಾಗರಿಕರು ಒಗ್ಗಟ್ಟಾದರೆ ಮಾತ್ರ ಯಶಸ್ಸು ಸಾಧ್ಯ ಎಂದರು.
ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಕಾರ್ಪೊರೇಟರ್ ಲತೀಫ್ ಕಂದಕ್, ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ವಕೀಲರಾದ ಚರಣ್ ಶೆಟ್ಟಿ, ನಿತಿನ್ ಕುತ್ತಾರ್, ಸಾಮಾಜಿಕ ಕಾರ್ಯಕರ್ತರಾದ ಡಾ. ಕೃಷ್ಣಪ ಕೊಂಚಾಡಿ, ಮಾಲಿನಿ ನಾಯಕ್, ಸಮರ್ಥ್ ಭಟ್, ಗೂಡ್ಸ್ ಟೆಂಪೊ ಚಾಲಕ ಮಾಲಕರ ಸಂಘದ ಸಿರಾಜ್ ಮೋನು, ಟ್ಯಾಕ್ಸಿ ಯೂನಿಯನ್ ಮುಖಂಡರಾದ ಶ್ರೀನಿವಾಸ ಗಟ್ಟಿ, ಇಸ್ಮಾಯಿಲ್, ವಿದ್ಯಾರ್ಥಿ ಮುಖಂಡರಾದ ರೇವಂತ್ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
10/09/2022 07:46 pm