ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ: "ಸ್ವಾತಂತ್ರ್ಯೋತ್ಸವ ಕೇವಲ ತೋರಿಕೆಯಾಗಬಾರದು : ಮೌಲಾನ ಯುಕೆ ಅಬ್ದುಲ್ ಅಝೀಝ್ ದಾರಿಮಿ

ಉಪ್ಪಿನಂಗಡಿ ; ಇಲ್ಲಿಗೆ ಸಮೀಪದ ಕೆಮ್ಮಾರದಲ್ಲಿ ಶಂಸುಲ್ ಉಲಮಾ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಮುನ್ನಡೆಯುತ್ತಿರುವ ವುಮನ್ಸ್ ಶರೀಹತ್ ಹಾಗೂ ದಹವಾ ಕಾಲೇಜಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಅಭಿಯಾನ ಹಾಗೂ ಸಮಸ್ತದ ಹಿರಿಯ ಚೇತನ ಶೃಂಗೇರಿ ನಾರ್ವೆ ಮಹ್ಮೂದ್ ಮುಸ್ಲಿಯಾರ್ ರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸುನ್ನಿಯುವ ಜನ ಸಂಘದ ಜಿಲ್ಲಾದ್ಯಕ್ಷ ಪ್ರಖರ ವಾಗ್ಮಿ ಮೌಲಾನ ಯುಕೆ ಅಬ್ದುಲ್ ಅಝೀಝ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ದೇಶದ ಸ್ವಾತಂತ್ರ್ಯ ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಸಂಭ್ರಮವು ಕೇವಲ ತೋರಿಕೆ ಮಾತ್ರವಾಗಿರದೇ ಹೃದಯದಿಂದ ದೇಶದ ಅಭಿಮಾನ ಪ್ರಕಟವಾಗಲು ಉಪಯುಕ್ತವಾಗ ಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಎಸ್ ಬಿ ದಾರಿಮಿ ಮಾತನಾಡಿ ಶಿಕ್ಷಣ ಕ್ರಾಂತಿಯಿಂದಲೇ ದೇಶದ ಪ್ರಗತಿ,ಮೌಲ್ಯಯುತ ಶಿಕ್ಷಣವೂ ಇಂದಿನ ಅಗತ್ಯವಾಗಿದೆ.ಅದಕ್ಕೆ ಪ್ರಾಮುಖ್ಯತೆ ಕೊಡುವ ನಿಟ್ಟಿನಲ್ಲಿ ಶರೀಹತ್ ಕಾಲೇಜ್ ಗಳು ಕಾರ್ಯಚರಿಸುತ್ತಿದ್ದು ಉದಾರಿಗಳ ಸಹಕಾರದಿಂದ ಸಂಸ್ಥೆಯಲ್ಲಿ ಮಹಿಳೆಯರಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಮಂಗಳ ನಗರ ದಾರುಸ್ಸಲಾಂ ಸಂಸ್ಥೆಯ ಅದ್ಯಕ್ಷ ತಬೂಕ್ ದಾರಿಮಿ ಮಾತನಾಡಿ ಮಹಿಳೆಯರು ಕಲಿತರೆ ಮುಂದಿನ ಪೀಳಿಗೆಗೆ ಅದರಿಂದ ದಾರಿ ಸುಲಭವಾಗುತ್ತೆ ಎಂದರು.

ಸಂಸ್ಥೆಯ ಮ್ಯಾನೇಜರ್ ಕೆಎಂಎ ಕೊಡುಂಗೈ ಪ್ರಸ್ತಾವಿಕವಾಗಿ ಮಾತನಾಡಿದರು. ದಾರುಲ್ ಹಸನಿಯ್ಯಾ ಸಂಸ್ಥೆಯ ಕರೀಂ ದಾರಿಮಿ ಬೊಲ್ವಾರ್ ,ಅನ್ವರ್ ಮುಸ್ಲಿಯಾರ್ ಮೊಟ್ಟೆತ್ತಡ್ಕ ,ರಝಾಕ್ ದಾರಿಮಿ ತಿಂಗಳಾಡಿ ಬಾ ಅಸನಿ ಉಸ್ತಾದ್ ಕೆಮ್ಮಾರ ಸಂಧರ್ಭೋಚಿತವಾಗಿ ಮಾತನಾಡಿದರು.

Edited By : PublicNext Desk
Kshetra Samachara

Kshetra Samachara

14/08/2022 07:36 am

Cinque Terre

2.64 K

Cinque Terre

1

ಸಂಬಂಧಿತ ಸುದ್ದಿ