ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:ಸಮಾಜ ಮುಖಿ ಕೆಲಸ ಶ್ಲಾಘನೀಯ: ಉಮಾನಾಥ ಕೋಟ್ಯಾನ್

ಮುಲ್ಕಿ: ಕಿನ್ನಿಗೋಳಿಯ ವೀರಮಾರುತಿ ವ್ಯಾಯಾಮ ಶಾಲೆಯು ಸಮಾಜ ಮುಖಿ ಕಾರ್ಯದಡಿಯಲ್ಲಿ ಶಿಕ್ಷಣಕ್ಕೆ ಸಹಕಾರ ಜೊತೆಗೆ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಶ್ಲಾಘನೀಯ ಹಾಗೂ ಇತರಿಗೆ ಮಾದರಿಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಕಿನ್ನಿಗೋಳಿ ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ನಡೆದ ಧಾರ್ಮಿಕ ಸಭೆ ಹಾಗೂ ಸಾಧಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಧಕರ ನೆಲೆಯಲ್ಲಿ ಸಿಎ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಶಯನ್ ಶೆಟ್ಟಿ ,ಅನೀಶ್ ಶೆಟ್ಟಿ, ವೇಟ್‌ ಲಿಫ್ಟಿಂಗ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕೀರ್ತನ್, ತೇಜಾಕ್ಷ ದಿಶಾ, ಸಿಯಾ ಶೆಟ್ಟಿ ರವರನ್ನು ಗೌರವಿಸಲಾಯಿತು, ಬಿಜೆಪಿಯ ನಾಯಕರಾದ ಕಸ್ತೂರಿ ಪಂಜ, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಶಕ್ತಿಕೇಂದ್ರದ ಅಧ್ಯಕ್ಷ ಜನಾರ್ದನ ಕಿಲೆಂಜೂರು,ಮುಲ್ಕಿ ನ.ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ, ಮಂಜುನಾಥ ಮಲ್ಯ, ಪ್ರಕಾಶ ಕುಕ್ಯಾನ್, ಮೋನಪ್ಪ ಗುಜರನ್, ಧನಂಜಯ ರೈ, ವೆಂಕಟರಮಣ ಆಚಾರ್ಯ, ವ್ಯಾಯಾಮ ಶಾಲೆಯ ಅಧ್ಯಕ್ಷ ಈಶ್ವರ ಕಟೀಲು,ಸಂಘಟಕ ಕೇಶವ ಕರ್ಕೇರಾ ಉಪಸ್ಥಿತರಿದ್ದರು ನಿತೇಶ್ ಎಕ್ಕಾರು ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

07/10/2022 02:26 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ