ಕುಂದಾಪುರ: ರಾಜ್ಯದ ಎರಡನೇ ಸುಪ್ರಸಿದ್ಧ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಭಕ್ತರಿಗೆ ಮತ್ತು ಭಕ್ತರ ಭಕ್ತಿಗೆ ದೇವಸ್ಥಾನದ ಮುಖ್ಯಸ್ಥರು ಅಪಮೌಲ್ಯ ಮಾಡಿದರೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಕುಂದಾಪುರ ತಾಲೂಕಿನ ಕಾಲಾವರದಲ್ಲಿರುವ ಪ್ರಸಿದ್ಧ ಶ್ರೀ ಕಾಳಿಂಗ ದೇವಸ್ಥಾನದಲ್ಲಿ ಇಂತಹ ಘಟನೆ ನಡೆದಿದೆ.
ಇಲ್ಲಿ ಶನಿವಾರ ಸಂಭ್ರಮದ ಶಕ್ತಿ ಮಹೋತ್ಸವ ಕಾರ್ಯಕ್ರಮ ನಡೆದಿತ್ತು ಈ ಸಂದರ್ಭ ಸುಬ್ರಹ್ಮಣ್ಯ ದೇವರಿಗೆ ಭಕ್ತರು ತಮ್ಮ ಇಷ್ಟಾರ್ಥ ಹಣ್ಣು ಕಾಯಿ ಸೇವೆ ನೀಡಲು ವಿಶೇಷ ಪೂಜೆ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಬಂದು ಭಾಗವಹಿಸಿದ್ದರು ಈ ಸಂದರ್ಭ ಭಕ್ತರು ದೇವರಿಗಾಗಿ ತಂದಿದ್ದ ಸಿಂಗಾರ, ,ಹೂ ಹಣ್ಣು ಉದುಬತ್ತಿ ಕರ್ಪೂರ,ಅರಶಿನ ಕುಂಕುಮ, ಬತ್ತಿ ಕಟ್ಟುಗಳನ್ನು ಎರ್ರಾ ಬಿರಿ ಬಿಸಾಡಲಾಗಿದೆ.!
ಭಕ್ತರು ಭಕ್ತಿಯಿಂದ ಸುಬ್ರಹ್ಮಣ್ಯ ಷಷ್ಠಿಗೆ ಭಾಗವಹಿಸಲು ಇರುವ ಅನಾನುಕೂಲತೆಗೆ ಕಾಳಾವರ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಹಣ್ಣು ಕಾಯಿ ಸೇವೆ ಮಾಡಿಸಲು ಅರ್ಪಿಸಬೇಕಿದ್ದ ಸಿಂಗಾರ ಹೂವು, ಕುಂಕುಮ, ಅರಿಶಿಣ, ಬತ್ತಿ ಕಟ್ಟುಗಳು ಈ ರೀತಿ ರಸ್ತೆಗೆ ಬಿದ್ದಿರುವುದು ಭಕ್ತರಿಗೆ ತೀರ ಬೇಸರ ಉಂಟು ಮಾಡಿದೆ. ಅಲ್ಲದೆ ಭಕ್ತರು ಮತ್ತು ದೇವರ ನಡುವಿನ ಸಂಪರ್ಕ ಕೊಂಡಿಯಂತಿರುವ ದೇವಸ್ಥಾನದ ಮುಖ್ಯಸ್ಥರು ಮತ್ತು ಪುರೋಹಿತರು ಈ ರೀತಿಯ ನಿರ್ಲಕ್ಷ್ಯ ತೋರಿರುವುದು ಭಕ್ತರ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಇನ್ನಾದರೂ ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಭಕ್ತರ ಭಾವನೆಗಳಿಗೆ ಗೌರವ ನೀಡುವರೇ ಕಾದು ನೋಡಬೇಕಿದೆ.
Kshetra Samachara
08/12/2024 04:51 pm