ಮುಲ್ಕಿ: ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಶ್ರೀ ದೇವರ ಉತ್ಸವ ಬಲಿ, ಪಲ್ಲಕ್ಕಿ ಉತ್ಸವ, ಬೊಂಬೆ ರಥೋತ್ಸವ, ವಿಜ್ರಂಭಣೆಯಿಂದ ನಡೆಯಿತು.
ಶ್ರೀ ದೇವರು ಪಲ್ಲಕ್ಕಿಯಲ್ಲಿ ವಿರಾಜಮಾನರಾಗಿ ನಾಗಸ್ವರ ವಾದನ ಸಹಿತ ವಿವಿಧ ವಾದ್ಯ ಸುತ್ತು ಭಕ್ತಿಭಾವ ಮೆರೆಯಿತು.
ಈ ಸಂದರ್ಭ ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ, ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ವೇಮೂ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಎಎಸ್ಐ ಚಂದ್ರಶೇಖರ್, ರಾಮಮೂರ್ತಿ ಭಟ್ ಕವತ್ತಾರು ಮತ್ತಿತರರು ಉಪಸ್ಥಿತರಿದ್ದರು.
ಬುಧವಾರ ದೇವಸ್ಥಾನದ ವರ್ಷಾವಧಿ ಮಹೋತ್ಸವದ ಅಂಗವಾಗಿ ಹಗಲು ರಥೋತ್ಸವ, ರಾತ್ರಿ ಶ್ರೀದೇವಿಯ ಶಯನೋತ್ಸವ, ಗುರುವಾರ ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ.
Kshetra Samachara
22/03/2022 10:41 pm