ಬೆಂಗಳೂರು ನೆರೆಯಿಂದಾಗಿ ಆದ ಅನಾಹುತದ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀಗಳು, ಮುಂದೆ ಇಂತಹ ಅನಾಹುತ ಆಗದಂತೆ ಸರಕಾರ ಶಾಸ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ನೀರಿಗಾಗಿ ಹಾಹಾಕಾರ ಪರಿಸ್ಥಿತಿ ಇದೆ. ಈಗ ನೀರು ಬಂದರೂ ಹಾಹಾಕಾರದ ಪರಿಸ್ಥಿತಿ ಉದ್ಭವವಾಗಿದೆ. ಕೆರೆಗಳಿದ್ದ ಸ್ಥಳಗಳನ್ನು ನೀರು ಸಂಗ್ರಹಕ್ಕೆ ಮೀಸಲಿಡಿ ಎಂದು ಸಲಹೆ ನೀಡಿರುವ ಅವರು, ಪ್ರಕೃತಿಯ ಸಹಜ ವ್ಯವಸ್ಥೆಗಳಿಗೆ ಮನುಷ್ಯ ಅಡ್ಡಿಪಡಿಸಬಾರದು.
ಭೌಗೋಳಿಕ ಪರಿಸರವನ್ನು ಹಾಗೆಯೇ ಉಳಿಸಿಕೊಂಡಿದ್ದರೆ ಈ ರೀತಿ ನೆರೆ ಬರುತ್ತಿರಲಿಲ್ಲ. ಮನೆ ಮತ್ತು ಕಟ್ಟಡ ನಿರ್ಮಾಣ ಮಾಡುವಾಗ ಭೌಗೋಳಿಕ ಪರಿಸರದ ವಿರುದ್ಧ ಹೋಗಬಾರದು. ಬೆಂಗಳೂರು ನೆರೆಯ ಬಗ್ಗೆ ತಜ್ಞರಿಂದ ವಿಮರ್ಶೆ ನಡೆಯಬೇಕು.ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
PublicNext
13/09/2022 12:11 pm