ತೆಂಗಿನ ಮರ ಹತ್ತುವಿಕೆ ತೀರಾ ಅಪಾಯಕಾರಿ ವೃತ್ತಿಯಾಗಿದೆ. ಈ ನಿಟ್ಟಿನಲ್ಲಿ ತೆಂಗಿನ ಮರ ಹತ್ತುವ ಅಸಂಘಟಿತ ವರ್ಗದ ಕ್ಷೇಮಾ ಭ್ಯುದಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತೋಟಗಾರಿಕಾ ಇಲಾಖೆಯ ಮೂಲಕ ತೆಂಗು ಅಭಿವೃದ್ಧಿಮಂಡಳಿ ಸಹಯೋಗದಲ್ಲಿ ಈ ವರ್ಗದ ಮಂದಿಗೆ ಆರಂಭಿಸಲಾದ ಕೇರಾ ವಿಮಾ, ಸುರಕ್ಷಾ ಯೋಜನೆಯು ಸರಕಾರದ ದಿಟ್ಟ ಕ್ರಮವಾಗಿದೆ. ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಗ್ರಾಪಂ ಹಾಗೂ ತೋಟಗಾರಿಕೆ ಇಲಾಖೆ, ಜಿಪಂ ಉಡುಪಿ ಸಹಯೋಗದಲ್ಲಿ ಹೆಜಮಾಡಿ ಗ್ರಾಪಂ ಸಭಾ ಭವನದಲ್ಲಿ ತೆಂಗಿನ ಮರ ಹತ್ತುವವರಿಗೆ ಕೇರಾ ಸುರಕ್ಷಾ ವಿಮೆ ಬಗ್ಗೆ ಮಾಹಿತಿ ಹಾಗೂ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಡುಪಿ ತೋಟಗಾರಿಕೆ ಇಲಾಖಾ ಉಪ ನಿರ್ದೇಶಕಿ ಭುವನೇಶ್ವರಿ ಕೇರಾ ಸುರಕ್ಷಾ ವಿಮೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಪಡಿಬಿದ್ರಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ, ಹೆಜಮಾಡಿ ಗ್ರಾಪಂ ಅಧ್ಯಕ್ಷ ಪಾಂಡುರಂಗ ಕರ್ಕೇರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇನಾಯತ್ ಅಲಿ, ಕಾರ್ಯಕ್ರಮದ ಸಂಯೋಜಕ, ಗ್ರಾಪಂ ಮಾಜಿ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
24/08/2022 01:17 pm