ಉಡುಪಿ: ಕರಾವಳಿಯಲ್ಕಿ ಸುರತ್ಕಲ್‌ನ ಅಕ್ರಮ ಟೋಲ್ ಗೇಟ್ ತೆರವು ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಟೋಲ್ ಗೇಟ್ ಹೋರಾಟ ಸಮಿತಿ ಅ.18 ರಂದು ನೇರ ಕಾರ್ಯಾಚರಣೆ ನಡೆಸಿ ಟೋಲ್ ಗೇಟ್ ತೆರವು ಮಾಡಲು ಮುಂದಾಗಿದೆ. ಈ ಬೃಹತ್ ಅಭಿಯಾನಕ್ಕೆ ಉಡುಪಿ ಜಿಲ್ಲೆಯ ಸಮಾನಮನಸ್ಕ ಸಂಘಟನೆಗಳ ಬೆಂಬಲವೂ ಸಿಕ್ಕಿದೆ.
ಅ.18 ರಂದು ಬೆಳಿಗ್ಗೆ 9.30 ಕ್ಕೆ ಸುರತ್ಕಲ್ ಟೋಲ್ ಗೇಟ್ ಮುಂಭಾಗ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನತೆ ಸಾವಿರಾರು ಸಂಖ್ಯೆಯಲ್ಲಿ ಸೇರಿ ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆ ಹಾಕುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಟೋಲ್ ಗೇಟ್ ನಲ್ಲಿ ನಡೆಯುವ ಸುಂಕ ಸಂಗ್ರಹವನ್ನು ಖಾಯಂ ಆಗಿ ಅಂತ್ಯಹಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಉಭಯ ಜಿಲ್ಲೆಗಳ ಸಾರಿಗೆ ಯೂನಿಯನ್‌ಗಳು, ಬಸ್, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಗೂಡ್ಸ್ ಲಾರಿ, ಟ್ರಕ್ ಮಾಲಕರ ಸಂಘಗಳು, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ ಸೇರಿದಂತೆ ಅಸಂಖ್ಯಾತ ಜನ ಪರ ಸಂಘಟನೆಗಳು, ವಿರೋಧ ಪಕ್ಷಗಳು ಈ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿವೆ. ನಾಗರಿಕರೂ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮುಖಂಡ ಬಾಲಕೃಷ್ಣ ಶೆಟ್ಟಿ ಮತ್ತು ಸುಂದರ್ ಮಾಸ್ತರ್ ಕೋರಿದ್ದಾರೆ.
Kshetra Samachara
12/10/2022 05:47 pm