ಉಡುಪಿ: ಪರೇಶ್ ಮೇಸ್ತ ಎಂಬ ಯುವಕನ ಸಹಜ ಸಾವನ್ನು ಮುಂದಿಟ್ಡುಕೊಂಡು ಬಿಜೆಪಿ ರಾಜ್ಯದಲ್ಲಿ ದೊಂಬಿ, ಗಲಭೆ ಸೃಷ್ಟಿ ಮಾಡಿತ್ತು.ಇಡೀ ರಾಜ್ಯದಲ್ಲಿ ಆಸ್ತಿಪಾಸ್ತಿ ನಾಶಕ್ಕೆ ಕಾರಣ ಆಗಿತ್ತು.ಈ ಪ್ರಕರಣವನ್ನು ಇಟ್ಟುಕೊಂಡು ಕೋಮು ಗಲಭೆ ನಡೆಸಿ ರಾಜಕೀಯ ಲಾಭ ಮಾಡಿಕೊಂಡಿತ್ತು.
ಈಗ ಸಿಬಿಐ ,ಪರೇಶ್ ಮೇಸ್ತ ಸಾವು ಸಹಜ ಸಾವು ಎಂದು ವರದಿ ನೀಡಿದೆ. ಈಗ ಬಿಜೆಪಿ ಮತ್ತು ಸಂಘ ಪರವಾರ ಏನು ಹೇಳುತ್ತದೆ? ನಷ್ಟವನ್ನು ತುಂಬಿ ಕೊಡುತ್ತದೆಯೇ ? ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಪ್ರಶ್ನಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ,ಪರೇಶ್ ಮೇಸ್ತ ಹೆಸರಲ್ಲಿ ಹಿಂದೂ ಮುಸ್ಲಿಂ ಗಲಭೆ ಸೃಷ್ಡಿ ಮಾಡಿ ಒಂದು ಸಮುದಾಯವನ್ನು ದೂಷಣೆ ಮಾಡಲಾಗಿತ್ತು.
ಒಂದು ವರ್ಷ ಈ ಪ್ರಕರಣವನ್ನು ಜೀವಂತವಾಗಿಟ್ಟು ಸಾಕಷ್ಟು ಆಸ್ತಿ ಪಾಸ್ತಿ ನಾಶಕ್ಕೆ ಬಿಜೆಪಿ ಮತ್ತು ಸಂಘ ಪರಿವಾರ ಕಾರಣವಾಗಿತ್ತು.ಈಗ ಸಿಬಿಐ ವರದಿ ಬಂದ ಬಳಿಕ ಬಿಜೆಪಿ ಮೌನಕ್ಕೆ ಜಾರಿದೆ.ಇದು ಬಿಜೆಪಿಯ ನಿಜ ಬಣ್ಣವನ್ನು ಬಯಲು ಮಾಡಿದೆ ಎಂದು ಅಶೋಕ್ ಕೊಡವೂರು ಹೇಳಿದ್ದಾರೆ.
PublicNext
07/10/2022 07:04 pm