ಮುಸಲ್ಮಾನರಲ್ಲಿ ಬಹುಸಂಖ್ಯಾತರು ಸಜ್ಜನರಿದ್ದು, ಕೆಲವೇ ಜನ ಪಿಎಫ್ ಐ ಮತ್ತು ಸಿಎಫ್ ಐ ಯಂತಹ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಸಂಘಟನೆಯನ್ನು ಮುಸ್ಲಿಂ ಸಮಾಜ ಬಹಿಷ್ಕರಿಸಬೇಕು ಎಂದು ಶಾಸಕ ರಘುಪತಿ ಭಟ್ "ಪಬ್ಲಿಕ್ ನೆಕ್ಸ್ಟ್" ಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ರಘುಪತಿ ಭಟ್, ನಾನು ಹಿಜಾಬ್ ಗಲಾಟೆ ಸಂದರ್ಭದಲ್ಲೇ ಹೇಳಿದ್ದೆ. ಎಲ್ಲ ಮುಸಲ್ಮಾನರೂ ಪಿಎಫ್ ಐಯನ್ನು ಒಪ್ಪುವುದಿಲ್ಲ ಅಂತ. ಸಂಘಟನೆಯ ಕೆಲವರು ಮುಸ್ಲಿಂ ಹೆಣ್ಣುಮಕ್ಕಳನ್ನು ಪ್ರಚೋದಿಸಿ ಗಲಾಟೆ ಮಾಡಿಸಿದರು. ಈಗ ನಾವು ಹೇಳಿದ್ದು ಸಾಬೀತಾಗಿದೆ. ಮುಸಲ್ಮಾನ ಸಮಾಜ ಎಚ್ಚೆತ್ತುಕೊಳ್ಳಬೇಕು. ದೇಶ ವಿರೋಧಿ ಕೃತ್ಯದಲ್ಲಿ ತೊಡಗಿದ ಸಂಘಟನೆಗಳನ್ನು ಸರಕಾರ ನಿಷೇಧಿಸಿದ್ದು, ಸ್ವಾಗತಾರ್ಹ ಬೆಳವಣಿಗೆ ಎಂದು ರಘುಪತಿ ಭಟ್ ಹೇಳಿದರು.
PublicNext
28/09/2022 06:12 pm