ಉಡುಪಿ: ಪಿಎಫ್ಐ ನಿಷೇಧದಿಂದ ತಮಗೆ ಸಂತೋಷವಾಗಿದೆ ಎಂದು ಪ್ರತಿಕ್ರಿಯೆ ನೀಡಿರುವ ಉಡುಪಿಯ ಪೇಜಾವರ ಶ್ರೀಗಳು, ಪಿಎಫ್‌ಐ ಮತ್ತೆ ಬೇರೆ ರೂಪದಲ್ಲಿ ಮರುಹುಟ್ಟು ಪಡೆಯದಂತೆ ಸರ್ಕಾರ ಮತ್ತು ಜನರು ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ನಿಷೇಧಕ್ಕೆ ಪೇಜಾವರ ಶ್ರೀ ಸಂತಸ ವ್ಯಕ್ತಪಡಿಸಿದ್ದು, ಸರ್ಕಾರ ಕೊನೆಗೂ ಉತ್ತಮ ಕೆಲಸ ಮಾಡಿದೆ. ಸಮಾಜವಿರೋಧಿ ಚಟುವಟಿಕೆ ನಡೆಸುವ ಯಾವುದೇ ಸಂಘಟನೆಗಳಿದ್ದರೂ ಅವಕ್ಕೆ ತಕ್ಕ ಶಾಸ್ತಿ ಮಾಡಬೇಕಿದೆ. ಈ ಸಂಘಟನೆಗಳನ್ನು ನಿಷೇಧ ಮಾಡಿರುವುದರಿಂದ ಶಾಂತಿ ಬಯಸುವ ಜನತೆಗೆ ಖುಷಿ ತಂದಿದೆ. ಮುಂದೆ ಕೂಡ ಇಂತಹ ಸಮಾಜ ವಿರೋಧಿ ಸಂಘಟನೆಗಳು ಬಾರದಂತೆ ಸರ್ಕಾರ ಮತ್ತು ಜನರು ನೋಡಿಕೊಳ್ಳಬೇಕಿದೆ ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದಾರೆ.
PublicNext
28/09/2022 02:09 pm