ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಭಾರತವನ್ನ 'ಇಸ್ಲಾಂ ರಾಷ್ಟ್ರ'ವನ್ನಾಗಿಸಲು ಪಿಎಫ್‌ಐ ಮುಂದಾಗಿತ್ತು; ಸಚಿವ ಸುನಿಲ್ ಕುಮಾರ್

ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿರುವುದು ಸ್ವಾಗತಾರ್ಹ. ಕಠಿಣ ನಿರ್ಧಾರ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಕಾರ್ಕಳದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಬಹಳ ವರ್ಷಗಳಿಂದ ರಾಜ್ಯ ಮತ್ತು ದೇಶಕ್ಕೆ ಹಿಂಸೆ ಒಂದು ಸವಾಲಾಗಿತ್ತು. ಹಾಗಾಗಿ ಪಿಎಫ್ಐ ಬ್ಯಾನ್ ಆಗಿರುವುದು ನಮಗೆಲ್ಲ ಸಂತೋಷ ತಂದಿದೆ. ಪಿಎಫ್ಐ ಹಿಂಸೆ ಮಾಡುತ್ತಾ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿತ್ತು. ಹಿಂದೂ ಸಂಘಟನೆಯನ್ನು ಗುರಿಯಾಗಿಸಿ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿತ್ತು. ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಸಂಘಟನೆ ಮುಂದಾಗಿತ್ತು. ಈಗ ಸೂಕ್ತ ಸಾಕ್ಷ್ಯ ಇಟ್ಟುಕೊಂಡು ಕೇಂದ್ರ ಬ್ಯಾನ್ ಮಾಡಿದೆ ಎಂದರು.

ಕಾಂಗ್ರೆಸ್ ಪೋಷಣೆ ಮಾಡಿದ್ದೇ ಪಿಎಫ್ಐ ಬೆಳವಣಿಗೆಗೆ ಕಾರಣ ಎಂದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ 175 ಕೇಸ್‌ಗಳನ್ನು ವಾಪಸ್ ಪಡೆಯಲಾಗಿತ್ತು. ನಮ್ಮ ಸರ್ಕಾರ ಬದ್ಧತೆ ತೋರಿಸಿ ಬ್ಯಾನ್ ಮಾಡಿದೆ. ಸಮಾಜಘಾತುಕ ಶಕ್ತಿಗಳನ್ನ ಬಿಜೆಪಿ ಹತ್ತಿಕ್ಕುತ್ತದೆ. ಭಾರತದಲ್ಲಿರುವವರು ಭಾರತವನ್ನು ಪ್ರೀತಿಸಿ ನೆಲದ ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.

Edited By :
PublicNext

PublicNext

28/09/2022 01:10 pm

Cinque Terre

23.16 K

Cinque Terre

1

ಸಂಬಂಧಿತ ಸುದ್ದಿ