ಉಡುಪಿ : ರಾಜ್ಯದಲ್ಲಿ 40% ಕಮಿಷನ್ ಸುದ್ದಿ ಜೋರಾಗಿ ಕೇಳಿಬರುತ್ತಿರುವುದರಿಂದ ನಮಗೆ ಕೆಲಸ ಮಾಡಲು ಸಮಸ್ಯೆಯಾಗುತ್ತಿದೆ. ನಾವು ಕಮಿಷನ್ ಗಾಗಿ ಕೆಲಸ ಮಾಡುವವರಲ್ಲ.ಯಾರೋ ಮಾಡಿದ ಆರೋಪಕ್ಕೂ ನಮಗೂ ಸಂಬಂಧ ಇಲ್ಲ ಅಂತ ಉಡುಪಿಯ ಗುತ್ತಿಗೆದಾರರು ಹೇಳಿದ್ದಾರೆ.
ಇವತ್ತು ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಢಿ ನಡೆಸಿದ ಪಿಡಬ್ಯುಡಿ ಗುತ್ತಿಗೆದಾರ ಮುನಿಯಾಲು ಉದಯಕುಮಾರ್ ಶೆಟ್ಟಿ ,ಕಮಿಷನ್ ಆರೋಪದಿಂದಾಗಿ ನಮಗೆ ಕೆಲಸ ಮಾಡಲು ಆಗುತ್ತಿಲ್ಲ. ನಿಮಗೆ 40 % ಕಮಿಷನ್ ಸಿಗುತ್ತದೆ ಎಂದು ಜನ ಮಾತಾಡುವಂತಾಗಿದೆ. ಇದರಿಂದಾಗಿ ನಮ್ಮ ವೃತ್ತಿ ಮಾಡಲೂ ತೊಡಕಾಗುತ್ತಿದೆ.ಉಡುಪಿ ಜಿಲ್ಲೆಯ ಮಟ್ಟಿಗೆ ಕಮಿಷನ್ ಆರೋಪ ನಿರಾಧಾರ. ಬೇರೆ ಕಡೆಯ ವಿಷಯ ನಮಗೆ ತಿಳಿದಿಲ್ಲ.ನಮಗೆ ಸರಕಾರದಿಂದ ಬಾಕಿ ಹಣ ಬರಬೇಕಿದೆ. ಅದನ್ನು ಸರಕಾರ ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತೇವೆ. ಆದರೆ ಈ ಕಮಿಷನ್ ಗೂ ನಮಗೂ ಯಾವುದೇ ಸಂಬಂಧ ಇಲ್ಲ ಅಂತ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ.ಅವರು ಉಡುಪಿ ಜಿಲ್ಲೆಯ ಗುತ್ತಿಗೆದಾರರ ಪರ ಸುದ್ದಿಗೋಷ್ಠಿ ನಡೆಸಿದರು.
Kshetra Samachara
26/09/2022 01:17 pm