ಮಂಗಳೂರು: ಬಿಲ್ಲವ ಸಮಾಜದ ಶೈಕ್ಷಣಿಕ ಮತ್ತು ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಅಥವಾ ಮಂಡಳಿಯನ್ನು ರಚಿಸಬೇಕು ಎನ್ನುವ ಬೇಡಿಕೆಗೆ ಸರಕಾರ ಭರವಸೆ ನೀಡಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಸಮಿತಿಯ ಅಧ್ಯಕ್ಷ ಸತ್ಯಜಿತ್ ಸೂರತ್ಕಲ್ ಕಿಡಿಕಾರಿದ್ದಾರೆ.
ಅವರು ಮಂಗಳೂರು ನಗರದ ಕುದ್ರೋಳಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ, ರಾಜ್ಯದಲ್ಲಿ ವಿವಿಧ ಒಳ ಪಂಗಡಗಳ ಮೂಲಕ ಗುರುತಿಸಿಕೊಂಡಿರುವ ಬಿಲ್ಲವ ಸಮುದಾಯ ದಲ್ಲಿ ಶೈಕ್ಷಣಿಕ ವಾಗಿ,ಆರ್ಥಿಕ ವಾಗಿ ಹಿಂದುಳಿದವರು ಸಾಕಷ್ಟು ಸಂಖ್ಯೆಯ ಲ್ಲಿದ್ದಾರೆ.ಆದುದರಿಂದ ಬಿಲ್ಲವ ರಿಗಾಗಿ ನಿಗಮದ ಅಗತ್ಯವಿದೆ ರೂ.500 ಕೋಟಿ ರೂ ಸರಕಾರ ನೀಡಬೇಕು. ಬಿಲ್ಲವರನ್ನು ಹಿಂದುಳಿದ ವರ್ಗ 2.ಎ ಯಿಂದ ಹಿಂದುಳಿದ ವರ್ಗ 1ಕ್ಕೆ ಸೇರಿಸಲು ಸರ್ಕಾರಕ್ಕೆ ಸಲ್ಲಿಸಲಾದ ಬೇಡಿಕೆಯನ್ನು ಸರಕಾರ ಪರಿಗಣಿಸಿಲ್ಲ. ಮಂಗಳೂರು ವಿಮಾನ ನಿಲ್ದಾಣ ಕ್ಕೆ ಕೋಟಿ ಚೆನ್ನಯರ ಹೆಸರಿಡ ಬೇಕು.ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕು ಎಂಬ ಬೇಡಿಕೆಯನ್ನು ಸರ್ಕಾರ ಪರಿಗಣಿಸದೆ ಬಿಲ್ಲವ ಸಮುದಾಯ ಕ್ಕೆ ನೀಡಬೇಕಾದ ಮನ್ನಣೆ ನೀಡಿಲ್ಲ ಎಂದು ಸತ್ಯಜಿತ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳಾದ ನಾಗರಾಜ ಗುತ್ತಿಗೆದಾರ, ರಾಘವೇಂದ್ರ ಸುಂಟರಹಳ್ಳಿ, ಮೂಡಬಾ ರಾಘವೇಂದ್ರ,ಅಚ್ಚುತ ಅಮೀನ್,ಕೃಷ್ಣ ಮೂರ್ತಿ, ಸಲಹೆ ಗಾರರಾದ ಕೇಶವಮೂರ್ತಿ, ಉಮೇಶ್ ಉಪಸ್ಥಿತರಿದ್ದರು.
Kshetra Samachara
19/09/2022 01:55 pm