ಮಂಗಳೂರು: ಪ್ರಧಾನಿ ಮೋದಿಯವರ ಮಂಗಳೂರಿನ ಕಾರ್ಯಕ್ರಮಕ್ಕೆ ಆಗಮಿಸಿರುವ ಖ್ಯಾತ ಉದ್ಯಮಿ ಬಿ.ಆರ್.ಶೆಟ್ಟಿಯವರನ್ನು ತಡೆದ ಪ್ರಸಂಗವೊಂದು ನಡೆದಿದೆ.
ಹೆಚ್ಚುವರಿ ಜನರನ್ನು ರಸ್ತೆಯಲ್ಲಿಯೇ ನಿಯಂತ್ರಣ ಮಾಡುವ ಸಲುವಾಗಿ ಮಧ್ಯಾಹ್ನ 12.30 ಸುಮಾರಿಗೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಕಾರ್ಯಕ್ರಮಕ್ಕೆ ಬರುವವರನ್ನು ರಸ್ತೆಯಲ್ಲಿಯೇ ತಡೆದಿದ್ದಾರೆ. ಇದೇ ವೇಳೆ ಉದ್ಯಮಿ ಬಿ.ಆರ್.ಶೆಟ್ಟಿಯವರೂ ಬಂದಿದ್ದಾರೆ. ಆದರೆ ಬಿ.ಆರ್.ಶೆಟ್ಟಿಯವರೆಂದು ತಿಳಿಯದೆ ಗೊಂದಲಕ್ಕೊಳಗಾದ ಪೊಲೀಸರು ಅವರನ್ನು ತಡೆದಿದ್ದಾರೆ.
ಅಷ್ಟರಲ್ಲಿ ಸ್ಥಳದಲ್ಲಿದ್ದವರು ಬಿ.ಆರ್.ಶೆಟ್ಟಿಯವರನ್ನು ತಡೆಯದಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಆ ವೇಳೆ ಬಿ.ಆರ್.ಶೆಟ್ಟಿಯವರ ಬಗ್ಗೆ ತಿಳಿದ ಪೊಲೀಸರು ಅವರನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತೆರಳಲು ಅನುವು ಮಾಡಿದ್ದಾರೆ.
Kshetra Samachara
02/09/2022 07:48 pm