ಮಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತಂತೆ ಅರೆಸ್ಟ್ ಆಗಿರುವ ಮುರುಘಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಕುರಿತು ಪ್ರತಿಕ್ರಿಯೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನಿರಾಕರಣೆ ಮಾಡಿದ್ದಾರೆ.
ಹೌದು ! ಮಂಗಳೂರು ನಗರಿಗೆ ಪಿಎಂ ಮೋದಿಯವರು ಆಗಮಿಸುತ್ತಿರುವ ಕಾರ್ಯಕ್ರಮದ ಸಂದರ್ಭ ಮಾಧ್ಯಮದವರು ಮುರುಘಾ ಶ್ರೀಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿರಾಕರಿಸಿದರು.
ಇಂದು ಪ್ರಧಾನಿಯವರ ಕಾರ್ಯಕ್ರಮ ಇರುವುದರಿಂದ ಈ ಬಗ್ಗೆ ಮಾತನಾಡುವುದಿಲ್ಲಾ, ಕಾರ್ಯಕ್ರಮದ ಬಳಿಕ ಕಾನೂನು ಕ್ರಮ, ಪ್ರಚಲಿತ ವಿದ್ಯಮಾನಗಳ ಕುರಿತು ಪ್ರತಿಕ್ರಿಯೆ ನೀಡುತ್ತೇನೆ. ಆಗ ಸಚಿವನಾಗಿ, ಸರ್ಕಾರದ ಪ್ರತಿನಿಧಿಯಾಗಿ ಮತ್ತೆ ನಿಮ್ಮೆದುರು ಬಂದು ಮಾತನಾಡುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡದೆ ನುಣುಚಿಕೊಂಡರು.
PublicNext
02/09/2022 12:59 pm