ಮಂಗಳೂರು: ರಾಜ್ಯ ಸರಕಾರ ದ.ಕ ಜಿಲ್ಲೆಯಲ್ಲಿ ನಡೆದಿರುವ ಸರಣಿ ಹತ್ಯೆಯಲ್ಲಿ ರಾಜಕೀಯ ಹಾಗೂ ಜಾತಿ ತಾರತಮ್ಯ ನೀತಿಯನ್ನು ಅನುಸರಿಸಿದೆ. ಪ್ರಧಾನಿ ಮೋದಿಯವರು ಸೆ.2ರಂದು ಮಂಗಳೂರಿಗೆ ಆಗಮಿಸುವ ಸಂದರ್ಭ ಜಿಲ್ಲಾಡಳಿತ ಅನುವು ಮಾಡಿಕೊಟ್ಟಲ್ಲಿ ನಾವು ಪ್ರಧಾನಿಯವರನ್ನು ಭೇಟಿಯಾಗಿ ಸರಕಾರದ ತಾರತಮ್ಯ ನೀತಿಯ ಬಗ್ಗೆ ಮನವಿ ಸಲ್ಲಿಸುತ್ತೇವೆ ಎಂದು ನ್ಯಾಯವಾದಿ ಉಮರ್ ಫಾರೂಕ್ ಹೇಳಿದರು.
ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಣಿ ಹತ್ಯೆಯ ವಿಚಾರದಲ್ಲಿ ರಾಜ್ಯ ಸರಕಾರ ತಾರತಮ್ಯ ನೀತಿಯನ್ನು ಕೈಬಿಟ್ಟು ಮೂರು ಹತ್ಯೆ ಪ್ರಕರಣವನ್ನು ಎನ್ಐಎ ತನಿಖೆಗೊಪ್ಪಿಸಬೇಕು. ಅಲ್ಲದೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಯುಎಪಿಎ ಪ್ರಕರಣ ದಾಖಲಿಸಿದಂತೆ ಮತ್ತೆರೆಡು ಕೊಲೆ ಪ್ರಕರಣದಲ್ಲೂ ಯುಎಪಿಎ ಪ್ರಕರಣ ದಾಖಲಿಸಿ ತನಿಖೆ ನಡೆಯಲಿ ಎಂಬ ನಮ್ಮ ಮನವಿಗೆ ಯಾವ ಸ್ಪಂದನೆಯೂ ದೊರಕಿಲ್ಲ.
ಇದೀಗ ನಾವು ನೀಡಿರುವ 10 ದಿನಗಳ ಗಡುವು ಮುಕ್ತಾಯಗೊಂಡಿದೆ. ಆದ್ದರಿಂದ ಸೆಪ್ಟೆಂಬರ್ 9ರಂದು ಮಧ್ಯಾಹ್ನ 3.30ಗೆ ಸುರತ್ಕಲ್ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಉಮರ್ ಫಾರೂಕ್ ಎಚ್ಚರಿಸಿದರು.
Kshetra Samachara
30/08/2022 11:00 pm