ಬ್ರಹ್ಮಾವರ : ಬ್ರಹ್ಮಾವರ-ಹೆಬ್ರಿ ಸೀತಾನದಿ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುತ್ತಿದ್ದು, ಈಗಾಗಲೇ ಬ್ರಹ್ಮಾವರದಿಂದ ಸೀತಾನದಿವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಬಹುತೇಕ ಕಾಮಗಾರಿ ಮುಗಿದಿದೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.
ಕಾಮಗಾರಿಯ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಚೇರ್ಕಾಡಿಯಿಂದ ಮುಂದುವರಿದ ಕಾಮಗಾರಿಗೆ ಶಾಸಕರ ಶಿಫಾರಸ್ಸಿನ ಮೇರೆಗೆ ರೂ. 33 ಕೋಟಿ ಅನುದಾನ ಮಂಜೂರಾಗಿದ್ದು, ಈ ರಸ್ತೆಯ ಕಾಮಗಾರಿಯನ್ನು ಕಂದಾಯ, ಅರಣ್ಯ, ಮೆಸ್ಕಾಂ, ಪಂಚಾಯತ್ ರಾಜ್ ಇಲಾಖೆಗಳ ಸಮನ್ವಯದೊಂದಿಗೆ ಪೂರ್ಣಗೊಳಿಸುವ ಮತ್ತು ಕಾರ್ಯರೂಪಕ್ಕೆ ತರುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭ ಮೆಸ್ಕಾಂ ಕಾರ್ಯ ಪಾಲಕ ಅಭಿಯಂತರ ಪ್ರಸನ್ನ ಕುಮಾರ್, ಬ್ರಹ್ಮಾವರ ತಹಶೀಲ್ದಾರ ರಾಜಶೇಖರ್ ಮೂರ್ತಿ, ಮೆಸ್ಕಾಂ ಬ್ರಹ್ಮಾವರ ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರವಿ ಕುಮಾರ್, ಉಡುಪಿ ಸಹಾಯಕಬಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೋ, ಸಹಾಯಕ ಅಭಿಯಂತರ ಗಿರೀಶ್, ಗುತ್ತಿಗೆದಾರ ರಾಜೇಶ್ ಕಾರಂತ ಹಾಗೂ ಇಲಾಖಾಧಿಕಾರಿಗಳು ಇದ್ದರು.
Kshetra Samachara
27/08/2022 05:01 pm