ಸುರತ್ಕಲ್: ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರದ್ದು ಮುಸ್ಲಿಂ ಏರಿಯಾ ಎನ್ನುವ ಹೇಳಿಕೆ ದೇಶ ವಿಭಜನೆಯ ಹೇಳಿಕೆಯಾಗಿದೆ. ಇದಕ್ಕೆ ದೇಶಭಕ್ತರು ತಮ್ಮದೇ ರೀತಿಯಲ್ಲಿ ಪ್ರತಿಭಟನೆಯನ್ನು ತೋರಿಸಿದ್ದಾರೆ ಎಂದು ಸಿದ್ದರಾಮಯ್ಯ ಅವರ ವಿರುದ್ಧ ಮೊಟ್ಟೆ ಎಸೆತ ಹಾಗೂ ಅವರ ಪ್ರಯಾಣದ ಸಂದರ್ಭ ನಡೆಯುವ ಪ್ರತಿಭಟನೆಯ ಕುರಿತಂತೆ ಶಾಸಕ ಡಾಕ್ಟರ್ ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಭಾರತ ಸಮಗ್ರ ರಾಷ್ಟ್ರೀಯತೆಯ ಭಾವನೆಯನ್ನು ಹೊಂದಿರುವ ಹಾಗೂ ಹಿಂದೂ ಬಹು ಸಂಖ್ಯಾತರು ಇರುವ ದೇಶವಾಗಿದೆ. ಸ್ವಾತಂತ್ರ್ಯ ಕಾಲದಲ್ಲಿ ಮುಸ್ಲಿಂ ಏರಿಯಾ ಎಂದು ಬಿಂಬಿಸಿ ಪಾಕಿಸ್ತಾನ ದೇಶವನ್ನು ರಚಿಸಲು ಕಾಂಗ್ರೆಸ್ ಮುಖಂಡರು ಅನುಮತಿಯನ್ನು ನೀಡಿರುವುದನ್ನು ಸ್ಮರಿಸಬಹುದು. ವೋಟ್ ಬ್ಯಾಂಕ್ ರಾಜಕೀಯಕ್ಕೆ ಸಿದ್ದರಾಮಯ್ಯ ಅವರು ಮತ್ತೆ ಅಲ್ಪಸಂಖ್ಯಾತರನ್ನು ಒಲೈಸುವ ಉದ್ದೇಶದಿಂದ ಮುಸ್ಲಿಂ ಏರಿಯಾ ಎಂದು ಬಿಂಬಿಸಿ ಮತ್ತೆ ವಿಭಜನೆಯ ಮಾದರಿಯ ಹೇಳಿಕೆ ಅಧಿಕಾರದ ದುರಾಸೆಯಿಂದ ಹೇಳಿರುವುದು ಖಂಡನೀಯ.
ದೇಶದ ಜನರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿ, ಪ್ರತಿಭಟನೆಯ ರೂಪದಲ್ಲಿ ಹೊರಹೊಮ್ಮಿದೆ ಎಂದು ಶಾಸಕರು ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಮತ್ತೆ ಬೆಂಕಿ ಹಚ್ಚುವ ಮಾತುಗಳನ್ನಾಡಿದ್ದು, ಈ ಕೆಲಸ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಬಿಜೆಪಿ ಸರಕಾರಕ್ಕೆ ಬೆಂಕಿಯನ್ನು ನಂದಿಸುವ ಶಕ್ತಿ ಸಾಮರ್ಥ್ಯವಿದೆ ಎಂದು ತಿರುಗೇಟು ನೀಡಿದ್ದಾರೆ.
Kshetra Samachara
20/08/2022 10:48 pm