ಉಡುಪಿ: ನಗರದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಫ್ಲೆಕ್ಸ್ - ಭಾವಚಿತ್ರಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಸಂವಿಧಾನ ವಿರೋಧಿ "ಜೈ ಹಿಂದೂ ರಾಷ್ಟ್ರ " ಎಂಬ ಬರಹಕ್ಕೆ ನಮ್ಮ ಆಕ್ಷೇಪ ಇದೆ. ಆದ್ದರಿಂದ ಸಂವಿಧಾನ ವಿರೋಧಿ ಬರಹದ ಫ್ಲೆಕ್ಸ್ ನ್ನು ಪೊಲೀಸ್ ಇಲಾಖೆ ಕೂಡಲೇ ತೆರವುಗೊಳಿಸಬೇಕು ಎಂದು ಎಸ್‌ಡಿಪಿಐ ಉಡುಪಿ ಜಿಲ್ಲಾ ಉಪಾಧ್ಯಕ್ಷ ಶಾಹಿದ್ ಅಲಿ ಆಗ್ರಹಿಸಿದ್ದಾರೆ.
ಉಡುಪಿಯ ಎಸ್‌ಡಿಪಿಐ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ರಾಷ್ಟ್ರ ಆರೆಸ್ಸೆಸ್ ಪರಿಕಲ್ಪನೆಯಾಗಿದೆ. ಹಿಂದೂ ಮತ ಪಡೆಯಲು, ಬೇರೆಯವರಿಂದ ಬೇರ್ಪಡಿಸಲು ಈ ಷಡ್ಯಂತ್ರ ನಡೆಸಲಾಗುತ್ತಿದೆ. ಉದ್ಯೋಗ ಇಲ್ಲದೆ ಹಿಂದೂ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಿಂದೂಗಳು ಕಷ್ಟದಲ್ಲಿದ್ದಾರೆ. ಬ್ರಾಹ್ಮಣರು ಈ ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಡಲು ಯತ್ನಿಸುತ್ತಿದ್ದಾರೆ. ಜನರನ್ನು ಉದ್ರೇಕಿಸಲು ನಡೆಸಿದ ಷಡ್ಯಂತ್ರ ಇದು ಎಂದರು.
ಸಾವರ್ಕರ್ ಭಾವಚಿತ್ರಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಹಿಂದೂ ರಾಷ್ಟ್ರ ಎಂದು ಬರೆದ ವಿವಾದಿತ ಈ ಫ್ಲೆಕ್ಸ್ ಮಾತ್ರ ತೆರವು ಮಾಡಬೇಕು. ಪೊಲೀಸರು ಜನರ ಭರವಸೆ ಹುಸಿ ಮಾಡಬಾರದು. ಉಡುಪಿಯ ಉಸಿರುಗಟ್ಟುವ ವಾತಾವರಣ ತಿಳಿಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
PublicNext
18/08/2022 01:48 pm