ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಾವರ್ಕರ್ ಭಾವಚಿತ್ರ ಅಳವಡಿಕೆಗೆ ಸಿದ್ದರಾಮಯ್ಯ, ಕಾಂಗ್ರೆಸ್ ಅನುಮತಿ ಅಗತ್ಯವಿಲ್ಲ; ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ಸ್ವಾತಂತ್ರ್ಯ ವೀರ‌ ಸಾವರ್ಕರ್ ಭಾವಚಿತ್ರ ಅಳವಡಿಕೆಗೆ ಸಿದ್ಧರಾಮಯ್ಯ ಅಥವಾ ಕಾಂಗ್ರೆಸ್‌ ನವರ ಅನುಮತಿಯ ಅಗತ್ಯವಿಲ್ಲ. ಸಾವರ್ಕರ್ ಅವರು ಸದಾ ನಮಗೆ ಆದರ್ಶ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.

ಮುಸ್ಲಿಮರು ಇರುವ ಪ್ರದೇಶಗಳಲ್ಲಿಯೇ ಏಕೆ ಸಾವರ್ಕರ್ ಭಾವಚಿತ್ರ ಏಕೆ ಎಂಬ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಮುಸ್ಲಿಮರ ಏರಿಯಾಗಳಲ್ಲಿಯೇ ಸಾವರ್ಕರ್ ಚಿತ್ರವೇಕೆ ಎನ್ನುವ ಸಿದ್ಧರಾಮಯ್ಯನವರೇ ಮುಸಲ್ಮಾನರ ಏರಿಯಾವೇನು ಪಾಕಿಸ್ಥಾನದಲ್ಲಿವೆಯೇ?. ಭಾರತದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಭಾವಚಿತ್ರ ಅಳವಡಿಕೆಗೆ ಸಿದ್ಧರಾಮಯ್ಯ ಅಥವಾ ಕಾಂಗ್ರೆಸ್ ನವರ ಅನುಮತಿ ಬೇಕಿಲ್ಲ ಎಂದು ಹೇಳಿದರು.

ಸಾವರ್ಕರ್ ಅವರು ಸುಮ್ಮನೆ ಎರಡೆರಡು ಜೀವಾವಧಿ ಶಿಕ್ಷೆಯ ಪಡೆದವರಲ್ಲ‌. ಅಂಡಮಾನ್ ನ ಕತ್ತಲೆ ಕೋಣೆಯೊಳಗೆ ಬಂಧಿಯಾಗಿದ್ದಾಗಲೂ ಸ್ವಾತಂತ್ರ್ಯದ ಕುರಿತು ಚಿಂತಿಸುತ್ತಿದ್ದ ಅವರನ್ನು ವಿರೋಧಿಸುವ ಹಕ್ಕು ಯಾರಿಗೂ ಇಲ್ಲ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿರುವ ಕಾರಣಕ್ಕೆ ಅವರನ್ನು ಸ್ವಾತಂತ್ರ್ಯ ವೀರ ಎಂದು ಕರೆಯುತ್ತಾರೆಯೇ ವಿನಃ ತಮಗೆ ತಾವೇ ಭಾರತ ರತ್ನ ಕೊಟ್ಟಿದ್ದಾರೆಂದು ಪಡೆದಿರುವ ಬಿರುದಲ್ಲ ಅದು. ಕರಿನೀರ ಶಿಕ್ಷೆ ದೂರದ ಮಾತು, ಐಷಾರಾಮಿ ವ್ಯವಸ್ಥೆಗಳಿದ್ದ ಜೈಲಿನೊಳಗೆ ರಾಜಕೀಯ ಖೈದಿಯಾಗಿ ಸೇರಿ ಅನಾರೋಗ್ಯದ ಕಾರಣ ನೀಡಿ ಕ್ಷಮಾರ್ಪಣೆ ಪತ್ರ ಬರೆದವರು ವೀರ ಸಾವರ್ಕರ್ ಕುರಿತು ಆಡಿಕೊಳ್ಳುವುದು ಹಾಸ್ಯಾಸ್ಪದ ಎಂದು ಶಾಸಕ ವೇದವ್ಯಾಸ ಕಾಮತ್ ಕಿಡಿ ಕಾರಿದ್ದಾರೆ.

Edited By : Nagaraj Tulugeri
PublicNext

PublicNext

17/08/2022 08:58 pm

Cinque Terre

24.17 K

Cinque Terre

12

ಸಂಬಂಧಿತ ಸುದ್ದಿ