ಬೈಂದೂರು: ತಾಲೂಕಿನ ಶಿರೂರಿನಲ್ಲಿ ನೆರೆ ಹಾವಳಿಯಿಂದ ಮೂವತ್ತಕ್ಕೂ ಅಧಿಕ ದೋಣಿಗಳು ಹಾನಿಗೊಳಗಾದ ಪ್ರದೇಶಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು.ಈ ವೇಳೆ ಮೀನುಗಾರರು ಸಚಿವರ ಜೊತೆ ತಮ್ಮ ಸಮಸ್ಯೆಗಳನ್ನುತೋಡಿಕೊಂಡರು.ಬಳಿಕ ಮಾತನಾಡಿದ ಸಚಿವ ಕೋಟ , ಮೀನುಗಾರರ ದೋಣಿಗಳಿಗೆ ಹಾನಿಗೊಳಗಾದ ಕುರಿತು ಅತ್ಯಧಿಕ ಅನುದಾನ ನೀಡಲು ಅವಕಾಶಗಳಿಲ್ಲ. ಹೀಗಾಗಿ ಪ್ರಾಕೃತಿಕ ವಿಕೋಪ ಸೇರಿದಂತೆ ಇತರ ವ್ಯವಸ್ಥೆ ಮೂಲಕ ಗರಿಷ್ಠ ಅನುದಾನ ಒದಗಿಸುವ ಪ್ರಯತ್ನ ಮಾಡುತ್ತೇನೆ. ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.ಮೀನುಗಾರರು ಮತ್ತು ಸ್ಥಳೀಯ ಮುಖಂಡರು ಈ ಸಂದರ್ಭ ಉಪಸ್ಥಿತರಿದ್ದರು.
Kshetra Samachara
09/08/2022 03:08 pm