ಸುಳ್ಯ: ಸುಳ್ಯ ನಗರ ಪಂಚಾಯತ್ ವಿಶೇಷ ಸಾಮಾನ್ಯ ಸಭೆ ನಗರ ಪಂಚಾಯತ್ ಸಭಾಂಗಣದಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ಸೋಮವಾರ ನಡೆಯಿತು. ನ.ಪಂ. ವಠಾರದಿಂದ ಸುಮಾರು 212 ಟನ್ ಕಸ ಈವರೆಗೆ ಸಾಗಾಟವಾಗಿದೆ. ಇನ್ನೂ ಶೇ.50ಕ್ಕಿಂತ ಸ್ವಲ್ಪ ಹೆಚ್ಚು ಸಾಗಾಟ ಆಗಬೇಕಿದ್ದು, ಈ ಹಿಂದೆ ಸಾಗಾಟ ನಡೆಸಿದವರೇ ಮುಂದುವರಿಸಲು ತಯಾರಿದ್ದಾರೆ ಎಂದು ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಾಹಿತಿ ನೀಡಿದರು.
ಸದಸ್ಯ ವೆಂಕಪ್ಪ ಗೌಡ ಮಾತನಾಡಿ, ಈವರೆಗೆ ಇಲ್ಲಿಂದ ಕಸ ಸಾಗಾಟ ನಡೆಸಿದ ಬಗ್ಗೆ ನೀಡಿರುವ ದಾಖಲೆಗಳ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಆರೋಪಿಸಿದರು. ಟೈಪಿಂಗ್ ಹಾಗೂ ಮ್ಯಾನ್ಯುವಲ್ ಬರಹದಲ್ಲಿ ವ್ಯತ್ಯಾಸ ಕಂಡುಬಂದಿದೆ. ಕಸ ಸಾಗಾಟಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನೂ ಅದರಲ್ಲಿ ದಾಖಲಿಸಿಲ್ಲ ಎಂದು ದೂರಿದರು. ಈ ಬಗ್ಗೆ ಕಳೆದ ಸಭೆಯಲ್ಲಿಯೇ ಪ್ರಸ್ತಾಪ ಮಾಡಿದ್ದೇನೆ ಎಂದರು. ಕಳೆದ ಸಭೆಯಲ್ಲಿ ಈ ಬಗ್ಗೆ ತಿಳಿಸಿದ್ದರೂ ಅದನ್ನು ಯಾಕೆ ಪಾಲಿಸಿಲ್ಲ ಎಂದು ಸದಸ್ಯ ರಾಧಕೃಷ್ಣ ರೈ ಬೂಡು ಪ್ರಶ್ನಿಸಿದರು. ಉತ್ತರಿಸಿದ ಮುಖ್ಯಾಧಿಕಾರಿ ಸುಧಾಕರ್ ಸಭೆಯ ಬಳಿಕ ಕಸ ಸಾಗಾಟವಾಗಿಲ್ಲ ಎಂದರು.
ನಾವು ಜವಬ್ದಾರರಲ್ಲ ಈವರೆಗೆ ಶೇ.50ರಷ್ಟು ಕಸ ಹೋಗಿದೆ ಎಂದು ಹೇಳುತ್ತೀರಿ, ವಠಾರದಲ್ಲಿ ಶೇ.50 ಕಸ ಇದೆ, ಉಳಿಕೆ ಅಲ್ಪ ಕಸ ಸಾಗಾಟವಾಗಬೇಕಿದೆ. ಆದರೆ ನೀವು 810 ಟನ್ ಬಾಕಿ ಕಸ ಸಾಗಾಟವಾಗಬೇಕಿದೆ ಎಂದು ತಿಳಿಸುತ್ತೀರಿ ನಿಮ್ಮ ಲೆಕ್ಕಚಾರವೇ ಸಮರ್ಪಕವಾಗಿಲ್ಲ ಎಂದ ಅವರು ಇರುವ ಕಸದ ಬಗ್ಗೆ ಯಾರು ಲೆಕ್ಕ ತಿಳಿಸಿದ್ದು ಎಂದು ಪ್ರಶ್ನಿಸಿದರು. ನಾವು ಹೇಳಿದಂತೆ ನೀವು ಪಾಲಿಸುತ್ತಿಲ್ಲ. ಮುಂದಕ್ಕೆ ಕಸ ಸಾಗಾಟದಲ್ಲಿ ಏನಾದರೂ ಸಮಸ್ಯೆಗಳು, ದೂರುಗಳು ಬಂದಲ್ಲಿ ನಾವು ಜವಬ್ದಾರರಲ್ಲ. ನಾನು ಮಾತನಾಡುವುದಿಲ್ಲ ಎಂದು ವೆಂಕಪ್ಪ ಗೌಡ ತಿಳಿಸಿದರು.
ಬರ್ನಿಂಗ್ ಕಾರ್ಯನಿರ್ವಹಣೆ ಕಲ್ಚರ್ಪೆಯಲ್ಲಿ ಅಳವಡಿಸಲಾಗಿರುವ ಬರ್ನಿಂಗ್ ಮೆಷಿನ್ ನಿರೀಕ್ಷೆಯಷ್ಟು ಕಾರ್ಯನಿರ್ವಹಿಸುತ್ತಿಲ್ಲ. ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯನಿರ್ವಹಿಸುವ ಆಗತ್ಯವಿದೆ. ಮೂರು ತಿಂಗಳ ಪ್ರಾಯೋಗಿಕ ಕಾರ್ಯನಿರ್ವಹಣೆಯಲ್ಲಿ ಒಂದು ತಿಂಗಳು ಕಳೆದಿದೆ. ಇನ್ನೂ ಎರಡು ತಿಂಗಳು ಬಾಕಿ ಇದೆ, ಈ ಸಮಯದಲ್ಲಿ ಅದರ ಕಾರ್ಯಕ್ಷಮತೆ ಹೆಚ್ಚಿಸಲು ಸೂಚಿಸಲಾಗುವುದು. ನ.ಪಂ. ವ್ಯಾಪ್ತಿಯಲ್ಲಿ ಸಂಗ್ರಹವಾಗುವ ದಿನದ ಕಸ ಅಂದೇ ಬರ್ನಿಂಗ್ ಮೆಷಿನ್‌ನಲ್ಲಿ ಖಾಲಿಯಾಗುತ್ತಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.ನಗರದ ಹೋಟೆಲ್, ಕ್ಯಾಂಟೀನ್‌ಗಳಲ್ಲಿ ಫುಡ್ ಪಾರ್ಸೆಲ್ ನೀಡುವಾಗ ಪ್ಲಾಸ್ಟಿಕ್‌ನಲ್ಲಿ ಹಾಕಿ ನೀಡಲಾಗುತ್ತದೆ. ಬಳಸಿದ ಬಳಿಕ ಇದರ ವಿಲೇವಾರಿ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಮನವರಿಕೆ ಮಾಡಬೇಕಿದೆ ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು.
ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ನ.ಪಂ. ಉಪಾಧ್ಯಕ್ಷೆ ಸರೋಜಿನಿ ಪೆಲತ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಕುರುಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ.ಪಂ. ಸದಸ್ಯರು, ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದ
Kshetra Samachara
08/08/2022 10:57 pm