ಮಂಗಳೂರು: ಕೇಂದ್ರದ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದ ವೇಳೆ ಅತಿವೃಷ್ಟಿ ಹಾನಿಯ ಬಗ್ಗೆ ಯಾವುದೇ ಮನವಿ ನೀಡದೆ ಬಿಜೆಪಿಗರು ಜನತೆಗೆ ಅನ್ಯಾಯವೆಸಗಿದ್ದಾರೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಕಿಡಿಕಾರಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಜನತೆ ಅತಿವೃಷ್ಟಿಯಿಂದ ತತ್ತರಿಸಿದ್ದರೂ ರಾಜ್ಯ ಸರಕಾರ ಜನರ ಕಣ್ಣೀರು ಒರೆಸುವ ಯೋಜನೆ ಜಾರಿಗೊಳಿಸಿಲ್ಲ. ಕೇಂದ್ರದ ಗೃಹಸಚಿವರು ರಾಜ್ಯಕ್ಕೆ ಭೇಟಿ ನೀಡಿದ ವೇಳೆ ರಾಜ್ಯದ ಸಿಎಂ , ಸಚಿವರು, ಸಂಸದರಿಗೆ ಕೇಂದ್ರ ಸರಕಾರದಲ್ಲಿ ರಾಜ್ಯಕ್ಕೆ ಬೇಕಾದ್ದನ್ನು ಕೇಳುವ ಧೈರ್ಯವಿಲ್ಲ. ಪರಿಣಾಮ ಜಿಲ್ಲೆಯ ಜನತೆ ಅನಾಥವಾಗಿದ್ದಾರೆ ಎಂದರು.
ಸುಳ್ಯದಲ್ಲಿ ಅತಿವೃಷ್ಟಿಯ ಪರಿಣಾಮ ಸಾಕಷ್ಟು ಹಾನಿಯಾದರೂ ಪರಿಹಾರ ನೀಡಲು ಉಸ್ತುವಾರಿ ಸಚಿವರ ಸಭೆ ನಡೆದಿಲ್ಲ. ಕಡಲ್ಕೊರೆತವಾಗಿರುವ ಉಳ್ಳಾಲ, ಸುರತ್ಕಲ್ ಗೆ ಸಿಎಂ ಸಹಿತ ಎಲ್ಲ ಸಚಿವರು ಭೇಟಿಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಎನ್ ಡಿ ಆರ್ ಎಫ್ ನಿಧಿಯಿಂದ ರಾಜ್ಯಕ್ಕೆ ಅನುದಾನ ಬರುತ್ತಿಲ್ಲ. ಕೇಂದ್ರ ಗೃಹ ಸಚಿವರು ರಾಜ್ಯ ಭೇಟಿಯ ವೇಳೆ ಪಕ್ಷದ ಬಗ್ಗೆ ಚರ್ಚೆಯಾಯಿತೇ ಹೊರತು ರಾಜ್ಯದ ಜನತೆಯ ಬಗ್ಗೆ ಚರ್ಚೆ ನಡೆದಿಲ್ಲ. ಜನರಿಗೆ ಕೊಡಬೇಕಾದ ಪರಿಹಾರದ ಬಗ್ಗೆ ಮನವಿ ಸಲ್ಲಿಸದೆ ರಾಜ್ಯದ 25 ಸಂಸದರು ಮೌನದಿಂದಿರುವ ಮೂಲಕ ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
Kshetra Samachara
06/08/2022 03:27 pm