ಕಟಪಾಡಿ: ಸ್ವಾತಂತ್ರ್ಯದ ಅಮೃತಮಹೋತ್ಸವ ಪ್ರಯುಕ್ತ ಇವತ್ತು ಕಾಂಗ್ರೆಸ್ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿತು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಈ ಜಾಥಾ ನಡೆಯಿತು.
ದೇಶಪ್ರೇಮ ಮತ್ತು ಸಾಮರಸ್ಯದ ಸಂದೇಶವನ್ನು ಸಾರುವ ಸಲುವಾಗಿ ಜಾಥಾ ಹಮ್ಮಿಕೊಳ್ಳಲಾಗಿದ್ದು ಬೆಳಿಗ್ಗೆ ಚಾಲನೆ ನೀಡಲಾಯಿತು.
ಕೋಟೆ ಗ್ರಾಮದ ಮಟ್ಟುವಿನಿಂದ ಪ್ರಾರಂಭಗೊಡು,ಕಟಪಾಡಿ-ಸುಭಾಸ್ ನಗರ ,ಕುರ್ಕಾಲು-ಶಂಕರಪುರ ಬಂಟಕಲ್ಲು-ಪಾಂಬೂರು-ಪಂಚಮಾರ್ ಮೂಲಕ ಸಾಗಿ, ಶಿರ್ವ ಪೇಟೆಯಲ್ಲಿ ಜಾಥಾ ಸಮಾಪನಗೊಂಡಿತು. ಬಳಿಕ ಶಿರ್ವ ಪೇಟೆಯಲ್ಲಿರುವ ಮಹಿಳಾ ಮಂಡಳಿಯ ಸಭಾಂಗಣದಲ್ಲಿ ಸಮಾರೋಪ ಸಭೆ ನಡೆಯಿತು.
ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಸ್ಮರಿಸುವ ಈ ಜಾಥಾದಲ್ಲಿ ಕೈ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಪಾಲ್ಗೊಂಡರು.
Kshetra Samachara
05/08/2022 04:06 pm