ಮಂಗಳೂರು:ಜಿಲ್ಲೆಯಲ್ಲಿ ವ್ಯಾಪಾರೋದ್ಯಮಗಳಿಗೆ ಸಂಜೆ 6 ಗಂಟೆ ಬಳಿಕ ನಿರ್ಭಂಧ ಹಾಕಿರುವುದರಿಂದ ಸಾಮಾನ್ಯ ಜನತೆಗೆ ಆಗಿರುವ ತೊಂದರೆ ಆಗಿದೆ.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ ಶಾಂತಿ ಸಭೆಗಳನ್ನು ಕರೆದು ವಾತಾವರಣವನ್ನು ತಿಳಿಗೊಳಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಆಮ್ ಆದ್ಮಿ ಪಕ್ಷದ ಪರವಾಗಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪಾರ ಜಿಲ್ಲಾಧಿಕಾರಿಗಳು ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ, ಮಾದ್ಯಮ ಸಂಚಾಲಕ ವೆಂಕಟೇಶ್ ಬಾಳಿಗಾ, ಡೆಸ್ಮಂಡ್ ಡಿಸೋಜಾ, ಸ್ಟೀಫನ್ ಪಿಂಟೋ, ರವಿಪ್ರಸಾದ್, ಆಮ್ ಆದ್ಮಿ ಪಾರ್ಟಿ ಮಂಗಳೂರು ಉತ್ತರ ಅಧ್ಯಕ್ಷ ನವಿನ್ ಚಂದ್ರ ಪೂಜಾರಿ, ರೋನಿ ಕ್ರಾಸ್ತಾ, ಬೆನೆಟ್ ಮೊರಾಸ್, ವಿದ್ಯಾ ರಾಕೇಶ್, ಪ್ರಥ್ವಿರಾಜ್, ಶಾನನ್ ಪಿಂಟೋ, ಕೆ. ಎನ್. ಶ್ರೀನಿವಾಸ್, ನವೀನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
03/08/2022 08:32 pm