ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಿಶ್ವಕರ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ: ವಿಶ್ವಕರ್ಮ ಮಹಾಸಭಾ

ಉಡುಪಿ: ಹಿಂದುಳಿದ ವರ್ಗದ 2 ಎ ವರ್ಗದಲ್ಲಿರುವ ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂಬುದು ನಮ್ಮ ಮುಖ್ಯ ಬೇಡಿಕೆಯಾಗಿದ್ದು, ಈ ಹೋರಾಟದಲ್ಲಿ ಸಮಾಜದ 42 ಪಂಗಡಗಳ ಪೈಕಿ 40 ಪಂಗಡಗಳು ಮುಂಚೂಣಿಯಲ್ಲಿವೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉಡುಪಿ ಜಿಲ್ಲಾಧ್ಯಕ್ಷ ನೇರಂಬಳ್ಳಿ ರಮೇಶ್ ಆಚಾರ್ಯ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜವನ್ನು ಕುಲಶಾಸ್ತ್ರ ಅಧ್ಯಯನ ಮಾಡಿಸದೆ ಮೂಲವನ್ನು ತಿಳಿಯದೇ ಸರಕಾರ ಮೀಸಲಾತಿ ವರ್ಗಗಳ 2 ಎ ಗುಂಪಿನಲ್ಲಿ ಸೇರಿಸಿದೆ. ಇದನ್ನು ಮನಗಂಡು ಸಮಾಜದ ಮುಖಂಡ ಕೆ.ಪಿ.ನಂಜುಂಡಿ ಸಮಾಜದ ಕುಲಶಾಸ್ತ್ರ ಅಧ್ಯಯನ ನಡೆಸಲು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ. ಮುಖ್ಯಮಂತ್ರಿ ಅದಕ್ಕೆ ಒಪ್ಪಿದ್ದಾರೆ.

ಸಮಾಜದ ಮುಖಂಡರಿಗೆ ಹಾಗೂ ಯುವ ಸಮುದಾಯಕ್ಕೆ ಮೀಸಲಾತಿ ವರ್ಗಗಳ ಬಗ್ಗೆ ಮಾಹಿತಿ ತಿಳಿಸಿ ಜಾಗೃತಿ ಮೂಡಿಸಲು ಜು.31 ರಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಶಾಸಕರ ಭವನದಲ್ಲಿ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ತಿಳಿಸಿದರು.

Edited By : Manjunath H D
Kshetra Samachara

Kshetra Samachara

28/07/2022 02:32 pm

Cinque Terre

7.6 K

Cinque Terre

1

ಸಂಬಂಧಿತ ಸುದ್ದಿ