ಮಂಗಳೂರು;ಕೇಂದ್ರ ಸರ್ಕಾರದಿಂದ ದಿನಬಳಕೆಯ ವಸ್ತುಗಳ ಮೇಲೆ ತೆರಿಗೆ ಹೆಚ್ಚಳವನ್ನು ವಿಧಾನಸಭೆ ವಿಪಕ್ಷ ಉಪನಾಯಕ ಯುಟಿ ಖಾದರ್ ಖಂಡಿಸಿದ್ದಾರೆ.ರಾಹುಲ್ ಗಾಂಧಿ ಅಂದೇ ಜಿಎಸ್ಟಿಯನ್ನು 'ಗಬ್ಬರ್ ಸಿಂಗ್ ಟಾಕ್ಸ್' ಅಂತಾ ಹೇಳಿದ್ದರು.ಆಗ ಜನ ಎಲ್ಲಾ ರಾಹುಲ್ ಗಾಂಧಿ ಮಾತಿಗೆ ನಕ್ಕಿದ್ದರು.ಆದರೆ ಈಗ ರಾಹುಲ್ ಮಾತು ನಿಜ ಅಂತಾ ಜನರಿಗೆ ಗೊತ್ತಾಗುತ್ತಿದೆ ಅಂತಾ ಯುಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನ ದ.ಕ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಯುಟಿ ಖಾದರ್,ಸರ್ಕಾರ ಮಕ್ಕಳು ತಿನ್ನುವ ಆಹಾರ,ಬಳಸುವ ಪೆನ್ನು,ಪೆನ್ಸಿಲ್ ಗೂ ತೆರಿಗೆ ಹಾಕಿದೆ..ಅಕ್ಕಿಗೆ ಬೇರೆ ಮಂಡಕ್ಕಿಗೆ ಬೇರೆ ತೆರಿಗೆ ಹಾಕಿದೆ..ಇಷ್ಟೆಲ್ಲಾ ತೆರಿಗೆ ಹಾಕಿದರೂ ಜನೋಪಯೋಗಿ ಯೋಜನೆ ಒಂದೂ ತರಲಿಲ್ಲ..ಜಿಎಸ್ಟಿ ಯಲ್ಲಿ ರಾಜ್ಯಕ್ಕೆ ಬಹುದೊಡ್ಡ ಅನ್ಯಾಯ ಮಾಡಿದೆ..ಆದರೆ ರಾಜ್ಯದ ಸಂಸದರೆಲ್ಲಾ ಪ್ಲಾಸ್ಟರ್ ಹಾಕಿ ಸುಮ್ಮನೆ ಕೂತಿದ್ದಾರೆ ಅಂತಾ ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಕೇಂದ್ರ ಸರ್ಕಾರ ಜನರನ್ನು ಲೂಟಿ ಮಾಡಿ ತನ್ನ ಖಜಾನೆ ತುಂಬಿಸುತ್ತಿದೆ..ಬಡವರು ಬಳಸುವ ವಸ್ತುಗಳಿಗೆ ತೆರಿಗೆ ಜಾಸ್ತಿ ಹಾಕಿದ್ದಾರೆ..ಆದರೆ ಶ್ರೀಮಂತರ ಮೇಲಿನ ಕಾರ್ಪೊರೇಟ್ ಟಾಕ್ಸ್ ಮಾತ್ರ ಕಡಿಮೆ ಮಾಡಿದ್ದಾರೆ..ಕೇಂದ್ರದ ಈ ನೀತಿಗೆ ಜನರ ಮೌನವೂ ಕಾರಣವಾಗಿದೆ.ಜನಸಾಮಾನ್ಯರ ಮೇಲೆ ಸರ್ಕಾರಕ್ಕೆ ಮಾನವೀಯತೆ ಕರುಣೆ ಇಲ್ಲ ಅಂತಾ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ..
PublicNext
19/07/2022 07:49 pm