ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಿಎಂ ಅಧ್ಯಕ್ಷತೆಯಲ್ಲಿ ಪ್ರಕೃತಿ ವಿಕೋಪ ಕುರಿತು ಸಭೆ ಆರಂಭ

ಉಡುಪಿ: ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಉಡುಪಿಯ ಮಣಿಪಾಲದಲ್ಲಿ ಕರಾವಳಿ ಜಿಲ್ಲೆಗಳ ನೆರೆಹಾನಿ ಸಭೆಗೆ ಆಗಮಿಸಿದ್ದಾರೆ. ದ.ಕ, ಉಡುಪಿ, ಉ.ಕ ಜಿಲ್ಲೆಗಳ ಅಧಿಕಾರಿಗಳ ಸಭೆಯು ಮಣಿಪಾಲದ ಜಿಲ್ಲಾಧಿಕಾರಿಗಳ ಸಮುಚ್ಛಯ ರಜತಾದ್ರಿಯಲ್ಲಿಆರಂಭಗೊಂಡಿದೆ.

ಸಭೆಯಲ್ಲಿ ಸಿ.ಎಂ ಬಸವರಾಜ ಬೊಮ್ಮಾಯಿ ಜೊತೆ, ಸಚಿವರಾದ ಆರ್ ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ಸಿ.ಸಿ ಪಾಟೀಲ್, ಉಡುಪಿ ಉಸ್ತುವಾರಿ ಎಸ್. ಅಂಗಾರ, ಮೂರು ಜಿಲ್ಲೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇವತ್ತಿನ ಸಭೆಯಲ್ಲಿ ನೆರೆ ಹಾನಿ ಮತ್ತು ಮಳೆಯಿಂದಾಸ ನಷ್ಟಗಳ ಬಗ್ಗೆ ಚರ್ಚೆ ನಡೆಯಲಿದೆ.

Edited By : Shivu K
Kshetra Samachara

Kshetra Samachara

13/07/2022 10:57 am

Cinque Terre

6.28 K

Cinque Terre

2

ಸಂಬಂಧಿತ ಸುದ್ದಿ