ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ದ.ಕ.ಜಿಲ್ಲೆಯ ಮಳೆಯ ಅವಾಂತರ, ನಷ್ಟಕ್ಕೆ ಸಚಿವರುಗಳ ವೈಫಲ್ಯ ಕಾರಣ!

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮಳೆಯಿಂದಾಗಿರುವ ಅವಾಂತರ ಹಾಗೂ ನಷ್ಟಕ್ಕೆ ಸಚಿವರುಗಳ ವೈಫಲ್ಯವೇ ಕಾರಣ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಗಂಭೀರ ಆರೋಪ ಮಾಡಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಮಳೆ ಹಾನಿಗೆ ಸಂಬಂಧಿಸಿದಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವರು, ಬಂದರು ಸಚಿವರು ಏನೂ ಮಾಡಿಲ್ಲ. ಕನಿಷ್ಠ ಪಕ್ಷ ಸ್ಥಳ ವೀಕ್ಷಣೆ, ಸಭೆಯನ್ನು ಮಾಡಿಲ್ಲ. ಇವರುಗಳು ಮುಂಜಾಗ್ರತಾ ಕ್ರಮಗಳನ್ನು ವಹಿಸಿದ್ದಲ್ಲಿ ಜಿಲ್ಲೆಯಲ್ಲಿ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಅಲ್ಲದೆ ರಾಜ್ಯ ಸಚಿವ ಸಂಪುಟದ ಸದಸ್ಯರು ಅವರ ಇಲಾಖೆ ಹಾಗೂ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಲ್ಲಿ ಇಂದು ಸಿಎಂ ರಾಜ್ಯ ಸುತ್ತುವಂತಹ ಪ್ರಮೇಯ ಬರುತ್ತಿರಲಿಲ್ಲ ಎಂದು ಹೇಳಿದರು.

ಕಡಲ್ಕೊರೆತಕ್ಕೆ ಸಂಬಂಧಿಸಿದಂತೆ ಶಾಶ್ವತ ಕಾಮಗಾರಿಯ ನಿರ್ವಹಣೆ ಮಾಡಿದ್ದಲ್ಲಿ ಯಾವುದೇ ತೊಂದರೆಗಳು ಆಗುತ್ತಿರಲಿಲ್ಲ. ಇದೀಗ ಕಂದಾಯ ಸಚಿವರು ಸ್ಥಳ ವೀಕ್ಷಣೆ ಮಾಡಿ ನಾಲ್ಕು ದಿನಗಳು ಆಯಿತು. ಕಡಲ್ಕೊರೆತ ತಡೆಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಗಳು ಇನ್ನೂ ಆಗಿಲ್ಲ. ಆದ್ದರಿಂದ ಈ ಬಗ್ಗೆ ಬಂದರು ಸಚಿವರು, ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ವೈಫಲ್ಯ, ನಿರ್ಲಕ್ಷ್ಯ, ಆಸಕ್ತಿ ಇಲ್ಲದಿರುವುದರಿಂದಲೇ ಮಳೆಹಾನಿಗೊಳಗಾದ ಸ್ಥಳಗಳಿಗೆ ಖುದ್ದಾಗಿ ಸಿಎಂ ಬರುವಂತಾಗಿದೆ. ಆದ್ದರಿಂದ ಜನಸಾಮಾನ್ಯರ ನೋವಿಗೆ ಸೂಕ್ತವಾಗಿ ಸ್ಪಂದಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಜನರು ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತವಾದ ಉತ್ತರ ಕೊಡಲಿದ್ದಾರೆ ಎಂದು ಯು.ಟಿ.ಖಾದರ್ ಹೇಳಿದರು.

Edited By :
Kshetra Samachara

Kshetra Samachara

12/07/2022 03:59 pm

Cinque Terre

11.7 K

Cinque Terre

1

ಸಂಬಂಧಿತ ಸುದ್ದಿ