ಮುಲ್ಕಿ: ಬಳ್ಕುಂಜೆ ಕೊಲ್ಲೂರು ಉಳೆಪಾಡಿ ಕೃಷಿ ಪ್ರದೇಶಗಳನ್ನು ಸರಕಾರ ಕೈಗಾರಿಕೆಗಳಿಗಾಗಿ ಭೂಸ್ವಾಧೀನಕ್ಕೆ ಮುಂದಾಗಿದ್ದು, ಸ್ಥಳೀಯರ ವಿರೋಧದ ನಡುವೆ ಕೆಐಎಡಿಬಿ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿ ಸರ್ವೆಗೆ ಮುಂದಾಗಿದ್ದಾರೆ.
ಕೃಷಿ ಭೂಮಿ ಸ್ವಾಧೀನ ಬಗ್ಗೆ ಐಕಳ ಮತ್ತು ಬಳ್ಕುಂಜೆ ಪಂಚಾಯತ್ ನ ಸಾಮಾನ್ಯ ಮತ್ತು ಗ್ರಾಮ ಸಭೆಯಲ್ಲಿ ನಿರ್ಣಯವಾಗಿದ್ದು, ಎರಡು ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಜಮೀನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿ ನಿರ್ಣಯ ಮಾಡಲಾಗಿತ್ತು.
ಈ ನಿಟ್ಟಿನಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಭೂ ಹಿತರಕ್ಷಣಾ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಭೇಟಿಯಾಗಿ ನಿರ್ಣಯದ ಪ್ರತಿಯನ್ನು ನೀಡಿದರು. ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಅನಗತ್ಯವಾಗಿ ನನ್ನ ವಿರುದ್ದ ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆ. ಹಿತರಕ್ಷಣಾ ಸಮಿತಿಗೆ ಸಂಪೂರ್ಣ ಬೆಂಬಲವಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಕೈಗಾರಿಕಾ ಸಚಿವರನ್ನು ಭೇಟಿಯಾಗುವುದಲ್ಲದೆ, ವಿಧಾನಸಭೆಯಲ್ಲಿ ಧ್ವನಿ ಎತ್ತಲಿದ್ದೇನೆ. ಗಾಳಿಸುದ್ದಿಗಳಿಗೆ ಅವಕಾಶ ನೀಡಬೇಡಿ, ಎಲ್ಲರೂ ಒಗ್ಗಟ್ಟಾಗಿರಿ ಎಂದರು. ಭೂ ಹಿತರಕ್ಷಣಾ ಸಮಿತಿ ಅಧ್ಯಕ್ಷರು, ಇತರ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
02/07/2022 03:11 pm